ಲಾಸ್ ವೇಗಾಸ್‌ನಲ್ಲಿನ ಹೋಟೆಲ್ ಬಳಿಯ ಸ್ಪೋಟಕ್ಕೆ ತಪ್ಪಾದ ವಾಹವನ್ನ ಆಯ್ಕೆ ಮಾಡಲಾಗಿದೆ ಎಂದು ವಿಶ್ವದ ಶ್ರೀಮಂತ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸೇರಿದ ಹೋಟೆಲ್ ಬಳಿ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಸ್ಕ್, ಟೆಸ್ಲಾ ಸೈಬರ್‌ಟ್ರಕ್ ಸ್ಫೋಟವು ಭಯೋತ್ಪಾದನಾ ಕೃತ್ಯ ಎಂದಿದ್ದಾರೆ. ಎಲೆಕ್ಟ್ರಿಕ್ ವಾಹನದ ಡಿಸೈನ್,, ಸ್ಫೋಟದ ಪ್ರಭಾವವನ್ನು ಕಡಿಮೆ ಮಾಡಿದೆ.. ಭಯೋತ್ಪಾದಕರು ದಾಳಿಗೆ ತಪ್ಪು ವಾಹನವನ್ನು ಆರಿಸಿಕೊಂಡಿದ್ದಾರೆ. ಸ್ಫೋಟದಿಂದ ಗಾಜಿನ ಬಾಗಿಲುಗಳು ಸಹ ಮುರಿದಿಲ್ಲ ಎಂದು ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನ್ಯೂ ಇಯರ್ ದಿನವೇ ಸ್ಫೋಟವೇ ಸಂಭವಿಸಿದ್ದು, ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದಲ್ಲಿ ಒಬ್ಬ ಮೃತಪಟ್ಟಿದ್ದು, ಏಳು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ..