ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದ್ದು, ಲೋಕಾಯುಕ್ತ ಪೊಲೀಸರು ಸಿಎಂಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಸಿಎಂ ಸೇರಿ 4 ಆರೋಪಿಗಳಿಗೂ ಕೂಡ ಕ್ಲೀನ್ ಚಿಟ್ ನೀಡಲಾಗಿದೆ. ಜೊತೆಗೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ನೋಟಿಸ್ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ದೂರು ಸ್ನೇಹಮಯಿಕೃಷ್ಣ ದೂರು ನೀಡಿದ್ದು, ಸಿದ್ದರಾಮಯ್ಯ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇರುವುದಾಗಿ ಉಲ್ಲೇಖಿಸಲಾಗಿದೆ. ಮುಡಾ ಪಕ್ರರಣದ ವರದಿಯನ್ನು ಸಿದ್ದಪಡಿಸಿರುವ ಲೋಕಾಯುಕ್ತ ಆರೋಪಿ 1 ರಿಂದ 4 ರವರ ಮೇಲಿನ ಆರೋಪಗಳಿಗೆ ಸಾಕ್ಯಾಧಾರ ಸಾಭಿತಾಗಿಲ್ಲ ಎಂದು ತಿಳಿಸಿದ್ದು, ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದೇವೆ. ಲೋಕಾಯುಕ್ತ ವರದಿಯನ್ನು ವಾರದೊಳಗೆ ಮ್ಯಾಜಿಸ್ಟ್ರೇಟರ್ ಎದುರು ವಿರೋಧಿಸಬಹುದು ಎಂದು ಸ್ನೇಹಮಯಿಕೃಷ್ಣಗೆ ಲೋಕಾಯುಕ್ತರಿಂದ ನೋಟೀಸ್ ನೀಡಿದೆ.