ಮಂಡ್ಯ : ಮಹದೇವಪುರ ದೇವಸ್ಥಾನದ ಜಾಗವನ್ನು ವಕ್ಛ್ ಆಸ್ತಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಮಂಡ್ಯದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಾತನಾಡಿ, ಇದು ನನ್ನ ಗಮನಕ್ಕೆ ಬಂದಿಲ್ಲ. ಈ ಸಂಬಂಧ ಇಂದೇ ಡಿಸಿ ಅವರ ಜೊತೆ ಮಾತಾಡುತ್ತೇನೆ. ಏನೆಲ್ಲಾ ಆಗಿದೆ, ಯಾವ ಕಾರಣಕ್ಕಾಗಿ ಆಗಿದೆ ಎಂದು ಮಾಹಿತಿ ತಗೋತಿನಿ. ನಾವು ಜನರು ಹಾಗೂ ರೈತರ ಪರ ಇದ್ದೇವೆ. ಆಗಿರುವ ಗೊಂದಲ ಹಾಗೂ ಸಮಸ್ಯೆಯನ್ನು ಸರಿಪಡಿಸುತ್ತೇವೆ. ಇದನ್ನು ವಿರೋಧ ಪಕ್ಷದವರು ಲಾಭ ಪಡೆಯಲು ಮುಂದಾಗಿದ್ದಾರೆ. ನಾವು ಅದಕ್ಕೆ ಅನುವು ಮಾಡಿಕೊಡಲ್ಲ. ಜನರ ಪರವಾಗಿ ನಾವು ಕೆಲಸ ಮಾಡ್ತೀವಿ ಎಂದು ವಪಕ್ಷಗಳ ವಿರುದ್ದ ಕಿಡಿಕಾರಿದ್ದಾರೆ.

ಗ್ಯಾರಂಟಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ವಿಚಾರದ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಅವರು, ನಮ್ಮ ಅಧ್ಯಕ್ಷರು ಯಾವಾಗ ಬೇಕಾದರೂ ಆದೇಶ ಮಾಡುವ ಅಧಿಕಾರ ಇದೆ. ನಮ್ಮ ಕೆಲವು ಮಾತಿಗೆ ಕಡಿವಾಣ ಹಾಕುವ ಅವಕಾಶ ಇದೆ. ಅವರು ಹೇಳಿದ್ದು ತಪ್ಪೇನಿಲ್ಲ. ತಂದೆ ಮಕ್ಕಳಿಗೆ ಬೈಯ್ಯದೆ ಇನ್ಯಾರಿಗೆ ಬೈತಾರೆ ಎಂದರು.
ನೆಕ್ಸ್ಟ್ ಸಿಎಂ ಡಿಕೆಶಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇದರ ಅವಶ್ಯಕತೆ ಇಲ್ಲ. ಎಲ್ಲವನ್ನೂ ಎಐಸಿಸಿ ತೀರ್ಮಾನ ಮಾಡ್ತಾರೆ. ಉಪಚುನಾವಣೆ ಮಾಡೋಣ. ಖರ್ಗೆ, ಸುರ್ಜೇವಾಲ, ರಾಹುಲ್ ಇದ್ದಾರೆ, ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯ, ಡಿಕೆ ಅವರು ಅನ್ಯೋನ್ಯವಾಗಿದ್ದಾರೆ. ಅವರೇ ತೀರ್ಮಾನ ಮಾಡ್ಕೋಳ್ತಾರೆ ಎಂದು ಹೇಳಿದ್ದಾರೆ.