ಕರ್ನಾಟಕ

ನಮ್ಮ ಪಕ್ಷದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ, ಇದು ವಿಪಕ್ಷಗಳ ಸೃಷ್ಟಿ ; ಶಾಸಕ ಕಾಗವಾಡ ರಾಜು..!

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ, ಸಿದ್ದು ಪರ ಕಾಗೆ ಬ್ಯಾಟ್ ಬಿಸಿದ್ದು, 224 ಜನರಲ್ಲಿ 135 ಜನ ಕೈ ಶಾಸಕರಿದ್ದೇವೆ ಎಲ್ಲ, ಶಾಸಕರಿಗೂ ಸಿಎಂ ಆಗುವ ಆಸೆ ಇರುತ್ತದೆ ಆದರೆ ಅದು ಸಾಧ್ಯವಾಗುವ ಮಾತಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ, ಇದು ವಿಪಕ್ಷಗಳ ಸೃಷ್ಟಿ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ಧಾರೆ.

ಬೆಳಗಾವಿ : ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಅಥಣಿ ತಾಲೂಕಿನ ಸಂಬರಗಿಯಲ್ಲಿ ಶಾಸಕ ಕಾಗವಾಡ ರಾಜು ಕಾಗೆ ಅವರು ಮಾತನಾಡಿದ್ದು, ಸಿದ್ದರಾಮಯ್ಯ ಐದು ವರ್ಷ ಆಡಳಿತ ನೀಡುತ್ತಾರೆ, ಅವರೇ ನಮ್ಮ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಮೇಲೆ ಕೇಳಿ ಬಂದಿರುವ ಆರೋಪದಿಂದ ಅವರು ಮುಕ್ತರಾಗುತ್ತಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಅಥಣಿ ತಾಲೂಕಿನ ಸಂಬರಗಿಯಲ್ಲಿ ಶಾಸಕ ಕಾಗವಾಡ ರಾಜು ಅವರು ಮಾತನಾಡಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ, ಸಿದ್ದು ಪರ ಕಾಗೆ ಬ್ಯಾಟ್ ಬಿಸಿದ್ದು, 224 ಜನರಲ್ಲಿ 135 ಜನ ಕೈ ಶಾಸಕರಿದ್ದೇವೆ ಎಲ್ಲ, ಶಾಸಕರಿಗೂ ಸಿಎಂ ಆಗುವ ಆಸೆ ಇರುತ್ತದೆ ಆದರೆ ಅದು ಸಾಧ್ಯವಾಗುವ ಮಾತಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ, ಇದು ವಿಪಕ್ಷಗಳ ಸೃಷ್ಟಿ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ಧಾರೆ.

ಈ ಕುರಿತು ಮಾತನಾಡಿದ ಅವರು, ಪಕ್ಷದ ನಾಯಕರಲ್ಲಿ ಕೂದಲೆಳೆಯಷ್ಟು ವೈಮನಸ್ಸು ಇಲ್ಲ, ಮುಂದಿನ ಐದು ವರ್ಷಗಳ ಕಾಲ ಜನರಿಗೆ ನೀಡಿರುವ ಆಶ್ವಾಸನೆ ಈಡೇರಿಸುತ್ತೇವೆ. ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕುಂಠಿತವಾಗಿಲ್ಲ, ಸಿದ್ದರಾಮಯ್ಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿ ರಾಜ್ಯದ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸುದ್ದಿಯ ನಡುವೆಯೇ ಸಿಎಂರನ್ನು ಹಾಡಿ ಹೊಗಳಿದ್ದಾರೆ.

ಇದೇ ವೇಳೆ ಗಣೇಶ ಮೆರವಣಿಗೆ ವೇಳೆ ಕೋಮು ಸಂಘರ್ಷ ವಿಚಾರವಾಗಿ ಮಾತನಾಡಿದ ಅವರು, ನಾಗಮಂಗಲದಲ್ಲಿಂದು ಪಟ್ಟಣದಲ್ಲಿ ಜಿಲ್ಲಾಡಳಿತ ಶಾಂತಿ ಸಭೆ ಕರೆದಿದೆ. ಸಚಿವ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.  ಎರಡು ಕೋಮಿನ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರ ಶಾಂತಿ ಸಭೆ ನಡೆಯಲಿದೆ. ಸೌಹಾರ್ದತೆ ಸಾಧಿಸವ ಮೂಲಕ ಶಾಂತಿ ಸಭೆ ನಡೆಯಲಿದೆ ಎಂದು ಹೇಳಿದ್ಧಾರೆ.