ಮೈಸೂರು : ಎಂ.ಎಲ್.ಸಿ ವಿಶ್ವನಾಥ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಇದೇ ವೇಳೆ ಮಾತನಾಡಿದ ಅವರು, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿಂದತೆ ವಂಚನೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆ ಬಳಿಕ ಸಚಿವ ಬಿ.ನಾಗೇಂದ್ರ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಕ್ಕೆ ಎಂ.ಎಲ್.ಸಿ ವಿಶ್ವನಾಥ್ ಕಿಡಿಕಾರಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಜೈಲಿನಿಂದ ಬಂದ ವ್ಯಕ್ತಿಯನ್ನು ಹಾರ ಹಾಕಿ ಸನ್ಮಾನ ಮಾಡಿದ್ರಿ. ಒಬ್ಬ ಸಿಎಂ ಆಗಿ ನಿಮ್ಮಿಂದ ಇಂತಹ ಕೆಲ್ಸ ನಿರೀಕ್ಷೆ ಮಾಡಿರಲಿಲ್ಲ. ವಾಲ್ಮೀಕಿ ನಿಗಮದ ಹಣ ತಿಂದ ವ್ಯಕ್ತಿಗೆ ಸನ್ಮಾನ ಮಾಡಿದ್ರಿ. ಮಾಜಿ ಮಂತ್ರಿ ನಾಗೇಂದ್ರಗೆ ಸನ್ಮಾನ ಮಾಡಿದ ಸಿಎಂ ವಿರುದ್ಧ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ