ಬೆಳಗಾವಿ : ಬೆಳಗಾವಿಗೆ ಸಿಎಂ ಬರುವ ದಿನವೇ ಮುಂದಿನ ಸಿಎಂ ಬ್ಯಾನರ್ ಅಳವಡಿಕೆ ಮಾಡಿದ್ದು, ಇಂದು ಸಿಎಂ ಸಿದ್ದರಾಮಯ್ಯ ಅವರು ಸವದತ್ತಿಗೆ ಆಗಮಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಆದಿಶಕ್ತಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಇತ್ತ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಬೋರ್ಡ್ ಅಳವಡಿಕೆ ಮಾಡಿದ್ದಾರೆ. ಇದು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಟಿ ಎ ನಾರಾಯಣಗೌಡ ಬಣದ ಕಾರ್ಯಕರ್ತರಿಂದ ಮುಂದಿನ ಸಿಎಂ ಸತೀಶ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು, ಬೃಹತ್ ಬ್ಯಾನರ್ ಗಳನ್ನು ನಗರದ ಚನ್ನಮ್ಮ ವೃತ್ತದಲ್ಲಿ ಅಳವಡಿಸಲಾಗಿದೆ. ಬ್ಯಾನರ್ ನಲ್ಲಿ ಸತೀಶ್ಗೆ ಭವಿಷ್ಯದ ಮುಂದಿನ ಮುಖ್ಯಮಂತ್ರಿಗಳು ಎಂದು ನಮೂದು ಮಾಡಲಾಗಿದೆ. ಕಾಂಗ್ರೇಸ್ ಕಾರ್ಯಕರ್ತರಿಗೆ ಕರವೇ ಕಾರ್ಯಕರ್ತರಿಗೆ ಸತೀಶ್ ಸಿಎಂ ಆಗುವ ಉತ್ಸುಕತೆ ಹೆಚ್ಚಾಗಿದ್ದು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಿಎಂ ಬದಲಾವಣೆ ಚರ್ಚೆ ಹೆಚ್ಚಾಗುತ್ತಿದೆ.
