ಬೆಳಗಾವಿ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಎಫ್ ಐಆರ್ ದಾಖಲಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಇದೆ ವೇಳೆ ಸಿದ್ದರಾಮಯ್ಯ ಹಿಂದೂ ದೇವರ ಆಶೀರ್ವಾದ ಪಡೆದುಕೊಂಡು ಮುಸ್ಲಿಮರನ್ನು ಓಲೈಸುತ್ತಾರೆ. ನಾವು ಎರಡು ಮಕ್ಕಳು ಎಂದರೆ ಮುಸ್ಲಿಂರು ಹಮ್ ಪಾಂಚ್ ಹಮಾರಾ ಪಂಚಿಸ್ ಅಂತಾರೆ ಎಂದು ವಿವಾದಾತ್ಮಕ ಹೇಳಿಕೆಯೊಂದು ನೀಡಿದ್ದಾರೆ.

ಇದೇ ವೇಳ ಮಾತಾನಾಡಿದ ಅವರು, ಸಿದ್ದರಾಮಯ್ಯ ಅವರು ಕುಂಕುಮ ಹಚ್ಚಿಕೊಳ್ಳಲು ಹಿಂದೇಟು ಹಾಕ್ತಿದ್ದರು. ಪೇಟ ತೊಟ್ಟುಕೊಳ್ಳಲು ನಿರಾಕರಣೆ ಮಾಡುತ್ತಿದ್ದರು. ಆದರೆ ಈಗ ಚಾಮುಂಡಿ ದರ್ಶನ ಯಾಕೆ ಪಡೆಯುತ್ತಿದ್ದಾರೆ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಇ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಿದ್ದರಾಮಯ್ಯ ಹಿಂದೂ ದೇವಸ್ಥಾನದಲ್ಲಿ ಆಶೀರ್ವಾದ ಪಡೆಯುತ್ತಾರೆ. ಆದರೆ ಮುಸ್ಲಿಮರ ಪರ ಕೆಲಸ ಮಾಡುತ್ತಾರೆ. ಎಸ್ ಟಿ. ಎಸ್ ಸಿ ಸಮುದಾಯದ ಹಣ ನುಂಗಿದ್ದಿರಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನುಂಗಿ ನೀರು ಕುಡಿದ್ರಿ. ಹಾಲುಮತದ ಸಮುದಾಯಕ್ಕೆ ಈವರೆಗೂ ಏನು ಮಾಡಿಲ್ಲ. ಆದರೆ ಮುಸ್ಲಿಮರಿಗೆ ರೂ.10,000 ಕೋಟಿ ನೀಡುತ್ತೇವೆ ಅಂತಾರೆ. ಯಾರ ಅಪ್ಪನ ಮನೆಯಿಂದ ಹಣ ಕೊಡುತ್ತೀರಿ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ತೆರಿಗೆ ತುಂಬುವುದು ನಾವು ಲೂಟಿ ಹೊಡೆಯುವುದು ಇವರು. ನಾವು ಒಂದೇ ಮದುವೆಯಾಗಿ ಎರಡು ಮಕ್ಕಳು ಮಾಡ್ತೀವಿ. ಅವರು ಹಮ್ ಪಾಂಚ್ ಹಮಾರಾ ಪಂಚಿಸ್ ಅಂತಾರೆ. ಈಗ ಸಮಾನ ನಾಗರಿಕತೆ ಕಾನೂನು ಜಾರಿಗೆ ತರುವುದಿದೆ ಹಾಲುಮತ ಲಿಂಗಾಯತ ದಲಿತರು ಎಂಬುದನ್ನು ಬಿಡಬೇಕು ನಾವೆಲ್ಲ ಹಿಂದೂಗಳು ಒಂದಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ ಕರೆ ನೀಡಿದರು.