ಕರ್ನಾಟಕ

ರಾಜ್ಯಧರ್ಮದಂತೆ CM ಅವ್ರು ತುರ್ತಾಗಿ ರಾಜೀನಾಮೆ ನೀಡ್ಬೇಕು : BJP ಶಾಸಕ ಜ್ಯೋತಿಗಣೇಶ್

ತುರ್ತಾಗಿ ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಬೇಕು‌‌. ರಾಜಕೀಯದ ಭಂಡತನಕ್ಕೆ ನಾವು ಉತ್ತರ ಕೊಡೋಕೆ ಆಗಲ್ಲ‌‌. ಗವರ್ನರ್ ತೀರ್ಮಾನವನ್ನ ಹೈ ಕೋರ್ಟ್ ಎತ್ತಿ ಹಿಡಿದಿದೆ‌‌. ಸಿಎಂ ರಾಜಿನಾಮೆ ಕುರಿತು ಹೋರಾಟ ಶುರುವಾಗಿದೆ ಗ್ರಾಸ್ ರೂಟ್ ಲೆವೆಲ್ ನಲ್ಲಿ ಮುಂದುವರಿಯುತ್ತೆ. ಮಾಜಿ ಸಿಎಂ ಬಿಎಸ್ ವೈ ಆ ಸಂದರ್ಭದಲ್ಲಿ ರಾಜಿನಾಮೆ ಕೊಟ್ಟಿದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ತುಮಕೂರು :  ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸುಕ್ಯುಷನ್ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಬಿಜೆಪಿ ಶಾಸಕ ಜ್ಯೋತಿಗಣೇಶ್ ಅವರು ಪ್ರತಿಕ್ರಿಯೆ ನಿಡಿದ್ದು, ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ನಿನ್ನೆ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿದ್ದೇವೆ. ಜೀವನದಾದ್ಯಂತ ನೀವು ನೈತಿಕತೆಯನ್ನ ಮಾತನಾಡಿಕೊಂಡು ಬಂದಿದ್ದೀರಾ. ಎನ್ಕೈರಿ ಆಗಿ ಕ್ಲೀನ್ ಚಿಟ್ ಆದ್ಮೇಲೆ ನೀವು ಬನ್ನಿ. ಎನ್ಕೈರಿ ಎಲ್ಲ ನಿಮ್ಮ ಅಂಡರ್ ನಲ್ಲೇ ನಡೆಯುವುದರಿಂದ,  ರಾಜ್ಯಧರ್ಮದಂತೆ ನೀವು ರಾಜೀನಾಮೆ ನೀಡಿ‌ ಎಂದು ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ತುಮಕೂರಿನಲ್ಲಿ ಮಾತನಾಡಿದ ಅವರು, ತುರ್ತಾಗಿ ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಬೇಕು‌‌. ರಾಜಕೀಯದ ಭಂಡತನಕ್ಕೆ ನಾವು ಉತ್ತರ ಕೊಡೋಕೆ ಆಗಲ್ಲ‌‌. ಗವರ್ನರ್ ತೀರ್ಮಾನವನ್ನ ಹೈ ಕೋರ್ಟ್ ಎತ್ತಿ ಹಿಡಿದಿದೆ‌‌. ಸಿಎಂ ರಾಜಿನಾಮೆ ಕುರಿತು ಹೋರಾಟ ಶುರುವಾಗಿದೆ ಗ್ರಾಸ್ ರೂಟ್ ಲೆವೆಲ್ ನಲ್ಲಿ ಮುಂದುವರಿಯುತ್ತೆ. ಮಾಜಿ ಸಿಎಂ ಬಿಎಸ್ ವೈ ಆ ಸಂದರ್ಭದಲ್ಲಿ ರಾಜಿನಾಮೆ ಕೊಟ್ಟಿದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.