ವೈರಲ್

ಸಿಎಂ ಸಿದ್ದರಾಮಯ್ಯ ಫ್ಲೈಯಿಂಗ್‌ ಖರ್ಚು !

35 ಕೋಟಿ ವಿಮಾನ ಹಾರಾಟಕ್ಕಾಗಿಯೇ ಸಿಎಂ ಸಿದ್ದರಾಮಯ್ಯ ಖರ್ಚು ಮಾಡಿದ್ದಾರೆ.

ಬೆಂಗಳೂರು - ಮುಖ್ಯಮಂತ್ರಿ ಸಿದ್ದರಾಮಯ್ಯ  ವೈಮಾನಿಕ ಹಾರಾಟಕ್ಕೆ ಬರೋಬ್ಬರಿ 35 ಕೋಟಿ ವೆಚ್ಚ ಆಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ವಿಮಾನ, ಹೆಲಿಕಾಪ್ಟ್ ಪ್ರಯಾಣಕ್ಕೆ ತಗುಲಿರುವ ಖರ್ಚು ೩೫ ಕೋಟಿ ಎಂದು ಲೆಕ್ಕ ಮಾಡಲಾಗಿದೆ. ಅತಿ ಹೆಚ್ಚು ತವರು ಜಿಲ್ಲೆ ಮೈಸೂರಿಗೆ ಓಡಾಡಿರೋ ಸಿದ್ದರಾಮಯ್ಯ , 20 ಬಾರಿ ಮೈಸೂರಿಗೆ ವಿಮಾನದಲ್ಲಿ ‌ಸರ್ಕಾರಿ ಕಾರ್ಯಕ್ರಮ, ಇನ್ನಿತರೆಗೆ ಓಡಾಟ ಮಾಡಿದ್ದಾರೆ. 

ನವದೆಹಲಿ, ಗೋವಾ, ಮೈಸೂರು, ಸುತ್ತೂರು, ಕೊಲ್ಹಾಪುರ, ಬಾರಾಮತಿ, ಹಾಸನ, ಹುಬ್ಬಳ್ಳಿ , ಪುಣೆ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ಹೈದ್ರಾಬಾದ್, ಕೊಪ್ಪಳ, ಚೆನ್ನೈ, ಬಾಗಲಕೋಟೆ, ತಿಂತಿಣಿ , ಶಿರಡಿ, ಬೀದರ್, ಬಾಲ್ಕಿ, ಕೂಡಲಸಂಗಮ, ಶಿವಮೊಗ್ಗ, ಸಂಗಮ, ತಿರುಪತಿ, ಟಿನರಸೀಪುರಕ್ಕೆ ವೈಮಾನಿಕ ಓಡಾಟ ಮಾಡಿದ್ದಾರೆ. ಹೊರರಾಜ್ಯ, ಹೊರದೇಶಗಳಿಗಿಂತ ರಾಜ್ಯದಲ್ಲಿ ಹೆಚ್ಚು ಓಡಾಟ ಮಾಡಿದ್ದಾರೆ ಸಿದ್ದರಾಮಯ್ಯ. ಕೇವಲ ಕಳೆದ ನಾಲ್ಕು‌ ತಿಂಗಳಲ್ಲೇ ಓಡಾಟಕ್ಕೆ 23 ಕೋಟಿ ವೆಚ್ಚವೂ ಮಾಡಿದ್ದಾರೆ.