ಕರ್ನಾಟಕ

110 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಇದು: ಸಿಎಂ ಸಿದ್ದರಾಮಯ್ಯ

ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಗೊಂಡಿದ್ದು, ನಾನು ಹಿಂದೆ ಸಿಎಂ ಆಗಿದ್ದಾಗ ಈ ಯೋಜನೆ ಮಂಜೂರು ಮಾಡಿದ್ದೆ. ಮತ್ತೆ ಸಿಎಂ ಆದಾಗ ಲೋಕಾರ್ಪಣೆ ಮಾಡ್ತಿರೋದು ಸಂತೋಷದ ವಿಷಯ ಎಂದು ವ್ಯಕ್ತಪಡಿಸಿದ್ದಾರೆ.

ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಗೊಂಡಿದ್ದು, ಬೆಂಗಳೂರಿಗೆ ಸೇರಿದ 110 ಹಳ್ಳಿಗೆ ನೀರು ಒದಗಿಸುವ ಯೋಜನೆ ಇದು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ಟಿ.ಕೆ ಹಳ್ಳಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ಸಿಎಂ ಆಗಿದ್ದಾಗ ಈ ಯೋಜನೆ ಮಂಜೂರು ಮಾಡಿದ್ದೆ. ಮತ್ತೆ ಸಿಎಂ ಆದಾಗ ಲೋಕಾರ್ಪಣೆ ಮಾಡ್ತಿರೋದು ಸಂತೋಷದ ವಿಷಯ ಎಂದು ವ್ಯಕ್ತಪಡಿಸಿದ್ದಾರೆ.

ಈ ಯೋಜನೆಗೆ ಸುಮಾರು 4,336 ಕೋಟಿ ಖರ್ಚಾಗಿದೆ. ಜಪಾನ್ ನ ಜೈಕಾ ಅವರಿಂದ ಆರ್ಥಿಕ ಸಹಾಯ ಪಡೆದು ಯೋಜನೆ ಮಾಡಲಾಗಿದೆ. ಹೆಚ್ಡಿಕೆ ಸಿಎಂ ಆಗಿದ್ದಾಗ ಈ 110 ಹಳ್ಳಿಗಳನ್ನ ಬೆಂಗಳೂರು ನಗರಕ್ಕೆ ಸೇರಿಸಿದರು. ಆಗ ಅವರು ಈ ಹಳ್ಳಿಗಳಿಗೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಲಿಲ್ಲ. ಆನಂತರ ಬಂದ ಬಿಜೆಪಿ ಕೂಡ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಈ ಯೋಜನೆ ವಿಳಂಬಕ್ಕೆ ಕಾರಣವಾಯ್ತು. 80 ಪರ್ಸೆಂಟ್ ಮಾತ್ರ ಜೈಕಾ ಅನುದಾನ ಕೊಟ್ಟಿತು. ಉಳಿದ ಅನುದಾನವನ್ನ ರಾಜ್ಯ ಸರ್ಕಾರ, BWSSB ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಂಪೂರ್ಣ ಬೆಂಗಳೂರಿಗೆ ನೀರು ಪೂರೈಸುವುದು ನಮ್ಮ ಉದ್ದೇಶವಾಗಿದೆ. 6ನೇ ಹಂತಕ್ಕೆ ಸುಮಾರು 7,200 ಕೋಟಿ ಅನುದಾನದ ಅವಶ್ಯಕತೆ ಇದೆ. ಆ ಹಣಕಾಸಿನ ನೆರವು ಪಡೆದು ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.