ಬೆಳಗಾವಿ : ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾನೂನಿನ ಪ್ರಕ್ರಿಯೆಯಿಂದ ಎಫ್‌ಐಆರ್ ದಾಖಲಾಗಿದೆ. ನಾವು ತನಿಖೆ ಎದುರಿಸುತ್ತೇವೆ ಅಂತಾ ಗಂಟಾಘೋಷವಾಗಿ ಸಿದ್ದರಾಮಯ್ಯ ಸಾಹೇಬರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ.. ಬಗ್ಗುವುದಿಲ್ಲ.. ಜಗ್ಗುವುದಿಲ್ಲ. ನಾವು ತನಿಖೆಯನ್ನ ಎದುರಿಸುತ್ತೇವೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿಯವರು ಒತ್ತಾಯ ವಿಚಾರಕ್ಕೂ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ಅವರಿಗೆ ನಾಚಿಕೆ ಆಗಬೇಕು, ಮೊದಲು ಕುಮಾರಸ್ವಾಮಿ ಅವರ ರಾಜೀನಾಮೆಗೆ ಒತ್ತಡ ಮಾಡಲಿ. ನಿರ್ಮಲಾ ಸಿತಾರಾಮನ್, ಮೋದಿಯವರ ರಾಜೀನಾಮೆಗೆ ಒತ್ತಾಯಿಸಿ. ಚುನಾವಣಾ ಬಾಂಡ್ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ಎಫ್‌ಐಆರ್ ದಾಖಲು ಮಾಡಿ ಅಂತಾ ಆದೇಶ ಮಾಡಿತ್ತು.ಮೊದಲು ಅದನ್ನ ಪಾಲಿಸಿ, ಅವರ ಮೇಲೆ ಕೇಸ್ ದಾಖಲಿಸಲಿ ಎಂದಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮುಡಾ ಪ್ರಕರಣ ಪ್ರಸ್ತಾಪ ವಿಚಾರ. ಇದೆಲ್ಲಾ ಚುನಾವಣಾ ತಗಂತ್ರಗಾರಿಕೆ. ಅತೀವೃಷ್ಠಿ, ಅನಾವೃಷ್ಠಿಗೆ ದುಡ್ಡು ಕೊಡಲಿಲ್ಲ. ಬರೀ ಚುನಾವಣೆ ಗೆಲ್ಲಲು ರಾಜಕಾರಣಕ್ಕೆ ನಮ್ಮ ಮುಖ್ಯಮಂತ್ರಿ ಹೆಸರು ತೆಗೆದುಕೊಂಡು ಭಾಷಣ ಮಾಡ್ತಾರೆ. ದೇಶದ ಜನ, ರಾಜ್ಯದ ಜನರು ನೋಡುತ್ತಿದ್ದಾರೆ. ಇವರಿಗೆ ಬೇಕಾಗಿರುವುದು ಕನ್ನಡಿಗರ ಶ್ರೇಯೋಭಿವೃದ್ಧಿ ಅಲ್ಲ. ಕರ್ನಾಟಕದ ಹೆಸರು ಕೆಡಸಿ ಹರಿಯಾಣದಲ್ಲಿ ಗೆಲ್ಲುವುದು ರಾಜಕೀಯ ಗಿಮಿಕ್. ಆದರೆ ಇವರು ಅದೇನೇ ಮಾಡಿದರೂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಯವರು ಎಷ್ಟು ಬೇಕು ಅಷ್ಟು ಹೋರಾಟ ಮಾಡಲಿ ಎಂದು ಸಚಿವೆ ಲಕ್ಷ್ಮಿ ಹೇಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.
====