ಕರ್ನಾಟಕ

ಸಿಎಂ ಸ್ವಾಭಿಮಾನಿ ಸಮಾವೇಶ: ಮೈಸೂರಿನಲ್ಲಿ ಎಫೆಕ್ಟ್..!

ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಜನಕಲ್ಯಾಣ ಹಾಗೂ ಸ್ವಾಭಿಮಾನಿ ಸಮಾವೇಶ ಅದ್ದೂರಿಯಾಗಿ ಆಚರಿಸಲು ಸಜ್ಜಾಗಿದೆ. ಆದರೆ ಈ ಸಮಾವೇಶದ ಬಿಸಿ ಇಡೀ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗೂ ತಟ್ಟಿದೆ.

ಮೈಸೂರು : ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಜನಕಲ್ಯಾಣ ಹಾಗೂ ಸ್ವಾಭಿಮಾನಿ ಸಮಾವೇಶ ಅದ್ದೂರಿಯಾಗಿ ಆಚರಿಸಲು ಸಜ್ಜಾಗಿದೆ. ಆದರೆ ಈ ಸಮಾವೇಶದ ಬಿಸಿ ಇಡೀ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗೂ ತಟ್ಟಿದೆ. ಸಿಎಂ ಸ್ವಾಭಿಮಾನಿ ಸಮಾವೇಶದ ಎಫೆಕ್ಟ್ ಮೈಸೂರಿನ ಬಸ್‌ ಮೇಲೂ ತಾಗಿದೆ. ಮೈಸೂರಿನಲ್ಲಿ ಬಸ್‌ಗಳ ಕೊರತೆ ಉಂಟಾಗಿದ್ದು, ಸರಿಯಾದ ಸಮಯಕ್ಕೆ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಸಿಡಿದೆದ್ದಿದಾರೆ. ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ವಿದ್ಯಾರ್ಥಿಗಳು ಬಸ್‌ಗಳನ್ನ ತಡೆದು ಆಕ್ರೋಶ ಹೊರ ಹಾಕಿದ್ದಾರೆ.
ಸಮಾವೇಶಕ್ಕೆ ನೂರಾರು ಸರ್ಕಾರಿ ಬಸ್ ಗಳನ್ನ ಬಳಸಿಕೊಂಡಿರುವ ಹಿನ್ನಲೆ ಶಾಲಾ ಕಾಲೇಜುಗಳಿಗೆ ತೆರಳಲು ವಿಧ್ಯಾರ್ಥಿಗಳಿಗೆ ಬಸ್ಸುಗಳ ಕೊರತೆಯುಂಟಾಗಿದೆ. ಹಾಸನದತ್ತ ಕಾರ್ಯಕರ್ತರನ್ನ ಕರೆದೊಯ್ಯುತ್ತಿರುವ ಬಸ್ ಗಳನ್ನ ತಡೆದು ಬಸ್ ಗಳಿಗೆ ಅಳವಡಿಸಲಾದ ಸಮಾವೇಶದ ಬ್ಯಾನರ್ ಗಳನ್ನ ಕಿತ್ತುಹಾಕಿ ಸ್ಟೂಡೆಂಟ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪೋಷಕರು ಹಾಗೂ ಸ್ಥಳೀಯರು ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದಾರೆ. ಇನ್ನು ಸ್ಥಳಕ್ಕಾಗಮಿಸಿದ ಪೊಲೀಸರು ವಿಧ್ಯಾರ್ಥಿಗಳ ಮನ ಒಲಿಸುವ ಪ್ರಯತ್ನ ಮಾಡಿದ್ರು.