ಕರ್ನಾಟಕ

ಮೆಟ್ರೋನಿಂದ ಪ್ರಯಾಣಿಕರು ದೂರ .. ದೂರಾ..?

ಮೆಟ್ರೋ ಬಿಟ್ಟು ಸ್ವಂತ ವಾಹನದಲ್ಲಿ ಪ್ರಯಾಣಿಕರ ಸಂಚಾರ ಪರಿಣಾಮ ಎಲ್ಲೆಡೆ ಟ್ರಾಫಿಕ್‌ ಜಾಮ್‌

ಬೆಂಗಳೂರು - ನಮ್ಮ ಮೆಟ್ರೋ ಪ್ರಯಾಣಕ್ಕೆ ಸಾರ್ವಜನಿಕರು ಆಸಕ್ತಿ ತೋರುತ್ತಿಲ್ಲ. ಕಾರಣ ಮೆಟ್ರೋ ಪ್ರಯಾಣ ದರ ಏಕಾಏಕಿ ದುಪ್ಪಟ್ಟು ಆಗಿದು , ಮೆಟ್ರೋ ಪ್ರಯಾಣಿಕರು ಟ್ರೈನ್‌ನಿಂದ ದೂರ ಉಳಿಯುವಂತೆ ಮಾಡಿದೆ. ಕಳೆದ ೪ ದಿನದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆ ಕಂಡಿದೆ. ಸಾರ್ವಜನಿಕರು ಮೆಟ್ರೋ ಬಿಟ್ಟು ತಮ್ಮ ಸ್ವಂತ ವಾಹನಗಳಲ್ಲಿ ಕಚೇರಿ , ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಈ ಎಲ್ಲದರ ಎಫೆಕ್ಟ್‌ ಸದ್ಯ ಬೆಂಗಳೂರಿನ ಬಹುತೇಕ ರಸ್ತೆಗಳು ಟ್ರಾಫಿಕ್‌ ಜಾಮ್‌ ನಿಂದ ತತ್ತರಿಸಿದೆ. 

ಕಳೆದ ೪ ದಿನಗಳ ಹಿಂದೆ ೮ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಸಂಚರಿಸುತ್ತಿದ್ದರೂ , ಈಗ ಚಿತ್ರಣ ಬದಲಾಗಿದು ಮೆಟ್ರೋ ಪ್ರಯಾಣಿಕರ ಸಂಖ್ಯೆ ೭ ಲಕ್ಷ ತಲುಪಿದೆ. ಹೀಗೆ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗುತ್ತಿದೆ.