ವೈರಲ್

ಕಾಂಡೋಮ್‌.. ಐಸ್ ಕ್ಯೂಬ್‌.. ಚಿಪ್ಸ್‌.. ನ್ಯೂ ಇಯರ್‌ಗೆ ಭರ್ಜರಿ ಆನ್‌ಲೈನ್‌ ಖರೀದಿ

ಆನ್‌ಲೈನ್‌ ಶಾಪಿಂಗ್‌ ಪ್ಲಾರ್ಟ್‌ಫಾರ್ಮ್‌ ಹೊಸ ವರ್ಷದ ಮುನ್ನಾದಿನದಂದು ಜನ ಬ್ಲಿಂಕಿಟ್‌ನಲ್ಲಿ ಹೆಚ್ಚಾಗಿ ಏನೆಲ್ಲಾ ಆರ್ಡರ್‌ ಮಾಡಿದ್ರು ಎಂಬ ಮಾಹಿತಿಯನ್ನು ಬ್ಲಿಂಕಿಟ್‌ ಸಿಇಒ ಅಲ್ಬಿಂದರ್‌ ದಿಂಡ್ಸಾ ಹಂಚಿಕೊಂಡಿದ್ದಾರೆ.

ಎಣ್ಣೆ ಜೊತೆ ಮಿಕ್ಸಿಂಗ್‌ಗೆ ಬೇಕಾದ ಚಿಪ್ಸ್‌, ಐಸ್‌ಕ್ಯೂಬ್‌ನಿಂದ ಹಿಡಿದು ಹಾಟ್‌ ಫೇವರಿಟ್‌ ಕಾಂಡೋಮ್‌ವರೆಗೆ ಬ್ಲಿಂಕಿಟ್‌ನಲ್ಲಿ ನ್ಯೂ ಇಯರ್‌ಗೂ ಮುನ್ನದಿನ ಹೆಚ್ಚಾಗಿ ಖರೀದಿ ಮಾಡಿರೋದು ಗೊತ್ತಾಗಿದೆ. ಹೊಸವರ್ಷಾಚರಣೆಗೆ ಜನರು ಏನೆಲ್ಲಾ ಬೈ ಮಾಡಿದ್ದಾರೆ ಅಂತಾ ಆನ್‌ಲೈನ್‌ ಶಾಪಿಂಗ್‌ ಪ್ಲಾರ್ಟ್‌ಫಾರ್ಮ್‌ ಬ್ಲಿಂಕಿಟ್‌ ಸಿಇಒ ಹಂಚಿಕೊಂಡಿದ್ದಾರೆ.

ನ್ಯೂ ಇಯರ್‌ಗೆ ಜನರು ಭರ್ಜರಿಯಾಗಿಯೇ ವೆಲ್‌ ಮಾಡಿಕೊಂಡಿದ್ದಾರೆ. 2024ಕ್ಕೆ ಬೈ..ಬೈ.. ಹೇಳಿ, 2025ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಪಾರ್ಟಿ ಅಂತೆಲ್ಲಾ ಮಿಡ್‌ನೈಟ್‌ ಫುಲ್‌ ಎಂಜಾಯ್‌ ಮಾಡಿದ್ದಾರೆ. ಮದ್ಯಪ್ರಿಯರಂತೂ ಕಿಕ್‌ನಲ್ಲಿಯೇ ಮುಳುಗಿದ್ದಾರೆ. ಅಷ್ಟೇ ಅಲ್ಲ. ನ್ಯೂಇಯರ್‌ ಸೆಲೆಬ್ರೇಷನ್‌ಗೆ ಜನರು ಏನೆಲ್ಲಾ ಖರೀದಿಸಿದ್ದಾರೆ ಅನ್ನೋದು ರಿವೀಲ್‌ ಆಗಿದೆ.  ಆನ್‌ಲೈನ್‌ ಶಾಪಿಂಗ್‌ ಪ್ಲಾರ್ಟ್‌ಫಾರ್ಮ್‌ ಹೊಸ ವರ್ಷದ ಮುನ್ನಾದಿನದಂದು ಜನ ಬ್ಲಿಂಕಿಟ್‌ನಲ್ಲಿ ಹೆಚ್ಚಾಗಿ ಏನೆಲ್ಲಾ ಆರ್ಡರ್‌ ಮಾಡಿದ್ರು ಎಂಬ ಮಾಹಿತಿಯನ್ನು ಬ್ಲಿಂಕಿಟ್‌ ಸಿಇಒ ಅಲ್ಬಿಂದರ್‌ ದಿಂಡ್ಸಾ ಹಂಚಿಕೊಂಡಿದ್ದಾರೆ.

ಡಿಸೆಂಬರ್‌ 31ರಂದು ರಾತ್ರಿ 8 ಗಂಟೆಯವರೆಗೆ ಸುಮಾರು 1,22,356 ಕಾಂಡೋಮ್‌ ಪ್ಯಾಕ್‌, 45,531 ಮಿನರಲ್‌ ವಾಟರ್‌ ಬಾಟಲ್‌,‌ 2,434 ಇನೋ ಆರ್ಡರ್‌ ಬಂದಿದೆ ಅಂತೆ.. ಅಷ್ಟೇ ಅಲ್ಲ ಆಲೂ ಭುಜಿ ದ್ರಾಕ್ಷಿ, ಪಾರ್ಟಿ ಸ್ಟೇಪಲ್ಸ್‌ಗಳಾದ ಚಿಪ್ಸ್, ಕೋಕ್‌ಗಳನ್ನು ಆರ್ಡರ್‌ ಬಂದಿದೆ ಅಂತಾ ಬ್ಲಿಂಕಿಟ್‌ ಸಿಇಒ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.. ಇದಕ್ಕೆ ವೆರೈಟಿ.. ವೆರೈಟಿ ಕಮೆಂಟ್‌ಗಳು ಬಂದಿವೆ. ಡಿಸೆಂಬರ್‌ 31ರಂದು ಮಾಡಿರುವ ಈ ಪೋಸ್ಟ್‌ 1.6 ಮಿಲಿಯನ್‌ ವೀವ್ಸ್‌ ಬಂದಿದ್ದು, ಕಾಂಡೋಮ್‌ ಖರೀದಿಯ ಬಗ್ಗೆ ಡಿಫರೆಂಟ್‌ ಜೋಕ್‌ಗಳ ಮಾಡಲಾಗಿದೆ.

1,22,356 packs of condoms
45,531 bottles of mineral water
22,322 Partysmart
2,434 Eno

..are enroute right now! Prep for after party? 😅