ಬೆಳಗಾವಿ : ಸತೀಶ್ ಜಾರಕಿಹೊಳಿ ಸಿಎಂ ಕೂಗು ವಿಚಾರಕ್ಕೆ ಸಂಬಂದಿಸಿದಂತೆ ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಸಿಎಂ ಯಾರು ಆಗಬೇಕು ಅಂತಾ ವೈಯಕ್ತಿಕವಾದ ಚರ್ಚೆಗೆ ನಾನು ಹೋಗಲ್ಲ. ಎಂಟುತ್ತು ಜನರು ಈಗಾಗಲೇ ರೆಡಿ ಇದಾರೆ. ಅವರ ಪಾರ್ಟಿಗೆ ಬಿಟ್ಟ ವಿಚಾರ ಎಂದ ಶೆಟ್ಟರ್. ಯಾವಾಗ ರಾಜೀನಾಮೆ ಕೊಡಬೇಕು ಅಂತಾ ಟೈಮಿಂಗ್ ನೋಡ್ತಿದ್ದಾರೆ. ಹರಿಯಾಣ ರಿಸಲ್ಟ್ ತಮ್ಮ ಪರ ಬರಬಹುದು ಅಂತಾ ಇದ್ರೂ. ಅವರ ಪರವಾಗಿ ಬಂದಿದ್ರೇ ಇನ್ನು ಸ್ವಲ್ಪ ಗಾಡಿ ಮುಂದೆ ಹೋಗ್ತಿತ್ತು ಎಂದು ಹೇಳಿದ್ದಾರೆ.

ಈಬಗ್ಗೆ ಮಾತನಾಡಿದ ಅವರು, ಈಗ ಅಲ್ಲಿ ನೆಗೆಟಿವ್ ಆಗಿದೆ ಹೀಗಾಗಿ ಯಾವಾಗ ಬೇಕಾದ್ರೂ ರಾಜೀನಾಮೆ ಕೊಡಬಹುದು. ನವೆಂಬರ್ ಇಲ್ಲಾ ಡಿಸೆಂಬರ್ ನಲ್ಲಿ ರಾಜೀನಾಮೆ ಆಗಬಹುದು. ಹೊಂದಾಣಿಕೆ ಆಗಿ ಮುಂದಿನ ಸಿಎಂ ಯಾರು ಅಂತಾ ನಿರ್ಧಾರ ಆದ ಮೇಲೆಯೂ ರಾಜೀನಾಮೆ ಆಗಬಹುದು. ಒಟ್ಟಿನಲ್ಲಿ ಅವರು ಸಿಎಂ ಸ್ಥಾನದಿಂದ ಇಳಿಯುವುದು ನಿಶ್ಚಿತ. ಅವರಾಗಿ ಇಳಿದು ಗೌರವುತವಾಗಿ ಹೊರ ಬಂದು ನಾನು ಹೇಳಿದವರನ್ನ ಮುಖ್ಯಮಂತ್ರಿ ಮಾಡಿ ಅಂದ್ರೆ ಗೌರವ ಸಿಗುತ್ತೆ. ಇಲ್ಲವಾದ್ರೇ ಅವರು ಹೇಳಿದವರು ಆಗುವುದಿಲ್ಲ. ಯಾರೋ ಮುಖ್ಯಮಂತ್ರಿ ಆಗ್ತಾರೆ ಎಂದು ಶೆಟ್ಟರ್ ಹೇಳಿದ್ದಾರೆ.