ಅನುಭವಿ ಸಿಎಂ ಸಿದ್ದರಾಮಯ್ಯ ಅವರು ಮುಂದಿನ 7ನೇ ತಾರೀಖು 16ನೇ ಬಜೆಟ್ ಮಂಡಿಸ್ತಿದ್ದಾರೆ. ದಾಖಲೆಯ ಬಜೆಟ್ ಮಂಡಿಸ್ತಿದ್ದಾರೆ. ಹೆಚ್ಚು ಬಾರೀ ಬಜೆಟ್ ಮಂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತಿದೆ ಎಂದು ಬಿವೈ ವಿಜಯೇಂದ್ರ ತಿಳಿಸಿದ್ದಾರೆ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ರಾಜ್ಯದ ವಾಸ್ತವ ಪರಿಸ್ಥಿತಿ ಏನ್ ಇದೆ.. ಹಣಕಾಸಿನ ಪರಿಸ್ಥಿತಿ ಏನ್ ಇದೆ. ರಾಜಕೀಯ ಪರಿಸ್ಥಿತಿ ಏನ್ ಇದೆ ಅಂತ ತಿಳಿಸಲು ಸುದ್ದಿಗೋಷ್ಟಿ ಕರೆದಿದ್ದೇವೆ. ಗ್ಯಾರಂಟಿಯಿಂದ ಎಲ್ಲ ವರ್ಗದ ಜನರು ಸಂತೋಷದಲ್ಲಿ ಇದ್ದಾರೆ ಅಂತ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಅನ್ನುವ ಚರ್ಚೆ ಇದೆ. ಎಲ್ಲ ರಂಗದಲ್ಲೂ ಬೆಲೆ ಏರಿಕೆ ಮಾಡಿರೋ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತೆ. ಪ್ರಾಪರ್ಟಿಗಳ ನೋಂದಣಿ ಬೆಲೆ ಹೆಚ್ಚಾಗಿದೆ. ವಿದ್ಯುತ್ ದರ ಹೆಚ್ಚಾಗಿದೆ. ನೀರಿನ ದರ 30%, ಹಾಲಿನ ದರ 15% ಹಾಗೂ ಬಸ್ ಟಿಕೆಟ್ ದರ ಕೂಡ ಹೆಚ್ಚಾಗಿದೆ. ಎರಡನೇ ಬಾರೀ ಹಾಲು & ವಿದ್ಯುತ್ ದರ ಏರಿಕೆ ಮಾಡಬೇಕು ಅಂತ ಚರ್ಚೆ ಆಗಿದೆ. 1 ಲಕ್ಷ 90 ಸಾವಿರ ಕೋಟಿ ಸಾಲ ಕಾಂಗ್ರೆಸ್ ಸರ್ಕಾರ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತ್ರ ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳ ಕಚೇರಿಗಳಿಂದ ಸುಮಾರು 6 ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ ಇದ್ದು, ಅದರ ಬಗ್ಗೆ ಇಲಾಖೆಯ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ ಅಂತ ಇಂಧನ ಸಚಿವರು ಹೇಳಿದ್ದಾರೆ. ಇದರ ಅರ್ಥ ಇಲಾಖೆಗಳ ಬಿಲ್ ಕಟ್ಟಲು ಸಾಧ್ಯವಿಲ್ಲದಷ್ಟು ಪರಿಸ್ಥಿತಿಯಲ್ಲಿ ಸರ್ಕಾರ ಇದೆ. ರಾಜ್ಯ ಸರ್ಕಾರ ಒತ್ತಾಯ ಮೇರೆಗೆ ಮೆಟ್ರೋ ದರ ಏರಿಕೆ ಮಾಡಿದೆ. ಮೆಟ್ರೋ ಕಮಿಟಿ ದರ ಏರಿಕೆ ಮಾಡಿದೆ ಅದಕ್ಕೂ ಕಾರಣ ರಾಜ್ಯ ಸರ್ಕಾರ. ತಮಿಳುನಾಡು, ಕೇರಳ ಸೇರಿದಂತೆ ಅನೇಕ ಕಡೆ ದರ ಏರಿಕೆ ಆಗಿದೆ. ರಾಜ್ಯ ಸರ್ಕಾರ ಮೇರೆಗೆ ದರ ಏರಿಕೆ ಆಗಿದೆ. ಸಚಿವರು & ಸಿಎಂ ಕೇಂದ್ರ ಸರ್ಕಾರದ ಹೊಣೆ ಅಂತ ಹೇಳ್ತಾರೆ. ಸಬ್ಸಿಡಿ ಕೊಡಿ ಅಂತ ಯಾವುದೇ ರಾಜ್ಯ ಕೇಳಿಲ್ಲ. ರಾಜ್ಯ ಸರ್ಕಾರ ಕೇಳ್ತಿದೆ. ಗ್ಯಾರಂಟಿಗೆ ಹಣ ಇಲ್ಲದೇ ಈ ಸ್ಥಿತಿಗೆ ಬಂದಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿದ್ದಾರೆ. ಇವರು ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತೋರಿಸ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿ.ವೈ ವಿಜಯೇಂದ್ರ ವಾಗ್ದಾಳಿಯನ್ನ ನಡೆಸಿದ್ದಾರೆ.