ಕರ್ನಾಟಕ

ತೆರಿಗೆ ದುಡ್ಡಲ್ಲಿ ಕಾಂಗ್ರೆಸ್ ನವರು ಚೆಲ್ಲಾಟವಾಡ್ತಿದ್ದಾರೆ : ಸುರೇಶ್ ಬಾಬು

ಹಾಸನದ ಕಾಂಗ್ರೆಸ್ ಶಕ್ತಿ ಸಮಾವೇಶಕ್ಕೆ‌ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಕಿಡಿಕಾರಿದ್ದಾರೆ.

ಬೆಂಗಳೂರು : ಹಾಸನದ ಕಾಂಗ್ರೆಸ್ ಶಕ್ತಿ ಸಮಾವೇಶಕ್ಕೆ‌ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸುರೇಶ್ ಬಾಬು, ಕಾಂಗ್ರೆಸ್ ನವರ ಹಾದಿ ನೋಡಿದ್ರೆ ಸಿಎಂರನ್ನು ಎಲ್ಲಿ ಇಳಿಸ್ತಾರೋ ಎಂಬ ಭಯದಲ್ಲಿ ಸಮಾವೇಶಗಳನ್ನು ಮಾಡ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ಮತ್ತೆ ರೇವಣ್ಣ ಶಕ್ತಿ ಕುಗ್ಗಿಸೋಕೆ ಇವರಿಂದ ಸಾಧ್ಯವಿಲ್ಲ. ಯಾವ ಪುರುಷಾರ್ಥಕ್ಕೆ ಇವ್ರು ಸಮಾವೇಶ ಮಾಡ್ತಿದ್ದಾರೆ. ಸರ್ಕಾರದ ಹಣದಲ್ಲಿ, ಜನರ ತೆರಿಗೆ ಹಣದಲ್ಲಿ ಕಾರ್ಯಕ್ರಮ ಮಾಡ್ತಿದ್ದಾರೆ. ತೆರಿಗೆ ದುಡ್ಡಲ್ಲಿ ಕಾಂಗ್ರೆಸ್ ನವರು ಚೆಲ್ಲಾಟವಾಡ್ತಿದ್ದಾರೆ. ಅಭಿವೃದ್ಧಿಗೂ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಇವತ್ತು ನಾನು ಒಂದು ಸಭೆಗೆ ಹೋಗಿ ಬಂದೆ ಅಲ್ಲಿಯೂ ಅಧಿಕಾರಗಳು ಹೇಳ್ತಿದ್ರು ಅನುದಾನ ಇಲ್ಲ ಅಂತಾ. ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ ಆದರೆ ಸರ್ಕಾರದ ಹಣದಲ್ಲಿ ಪಕ್ಷದ ಸಮಾವೇಶ ಮಾಡ್ತಿದ್ದಾರೆ. ಆ ಸಮಾವೇಶದ ಖರ್ಚು ವೆಚ್ಚದ ಲೆಕ್ಕವನ್ನು ಕೊಡಬೇಕು ಎಂದ ಸುರೇಶ್ ಬಾಬು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ರು.