ವೈರಲ್

ಟೋಲ್​​ ಹಣ ಕಟ್ಟದೇ ‘ಕೈ’ ಮುಖಂಡ ಕ್ಯಾತೆ..ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ..! ವಿಡಿಯೋ ನೋಡಿ

ಬೆಂಗಳೂರು-ಮೈಸೂರು ಹೈವೇಯ ಗಣಂಗೂರು ಟೋಲ್ನಲ್ಲಿ, ಕಾಂಗ್ರೆಸ್ ಮುಖಂಡರೊಬ್ಬರು ಟೋಲ್ ಕಟ್ಟದೇ ಕ್ಯಾತೆ ತೆಗೆದಿದ್ದಾರೆ.

ಬೆಂಗಳೂರು-ಮೈಸೂರು ಹೈವೇಯ ಗಣಂಗೂರು ಟೋಲ್ನಲ್ಲಿ, ಕಾಂಗ್ರೆಸ್ ಮುಖಂಡರೊಬ್ಬರು ಟೋಲ್ ಕಟ್ಟದೇ ಕ್ಯಾತೆ ತೆಗೆದಿದ್ದಾರೆ. ಟೋಲ್ ಕಟ್ಟದೇ ಧಿಮಾಕು ತೋರಿಸಿದ್ದಲ್ಲದೇ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಟೋಲ್ನಲ್ಲಿ ಈ ಘಟನೆ ನಡೆದಿದೆ. 

ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಎಂದು ಕಾರಿನಲ್ಲಿ ನೇಮ್ ಬೋರ್ಡ್‌ ಇದೆ. ಈ ಕಾರಿನಲ್ಲಿ ಕುಳಿತಿದ್ದವರು ಟೋಲ್ ಅಮೌಟ್ ಕಟ್ಟದೇ ನಕಾರ ತೋರಿದ್ದಾರೆ. ಬಳಿಕ ಕಾರು ಬಿಡದೇ ಇದ್ದಾಗ ಕೆಳಗಿಳಿದ ಕಾಂಗ್ರೆಸ್ ಮುಖಂಡ, ಮಹಿಳಾ ಸಿಬ್ಬಂದಿ ಜುಟ್ಟು ಹಿಡಿದು ಹಲ್ಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದರೂ ಹಲ್ಲೆ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ. ದೂರನ್ನೂ ದಾಖಲಿಸಿಕೊರ್ಳಳದೇ ಅವರನ್ನು ಸ್ಥಳದಿಂದ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.