ಕರ್ನಾಟಕ

ಹೆಚ್‌ಡಿಕೆ ವಿರುದ್ಧ ಮುಂದುವರೆದ ʼಕೈʼ ಶಾಸಕರು..ದಿಶಾ ಸಭೆಗೆ ಗೈರು..!

ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಕಾಂಗ್ರೆಸ್‌ ಶಾಸಕರ ಅಸಹಕಾರ ಚಳವಳಿ ಮುಂದುವರಿದಿದೆ. ಹೆಚ್‌ಡಿಕೆ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎರಡನೇ ದಿಶಾ ಸಭೆಗೆ, ಕಾಂಗ್ರೆಸ್‌ ಶಾಸಕರು ಗೈರಾಗಿದ್ದಾರೆ.

ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಕಾಂಗ್ರೆಸ್‌ ಶಾಸಕರ ಅಸಹಕಾರ ಚಳವಳಿ ಮುಂದುವರಿದಿದೆ. ಹೆಚ್‌ಡಿಕೆ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎರಡನೇ ದಿಶಾ ಸಭೆಗೆ, ಕಾಂಗ್ರೆಸ್‌ ಶಾಸಕರು ಗೈರಾಗಿದ್ದಾರೆ. ಆಗಸ್ಟ್ 26ರಂದು ನಡೆದಿದ್ದ ಮೊದಲ ದಿಶಾ ಸಭೆಯಲ್ಲಿ,ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಕೆ.ಎಂ.ಉದಯ್, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿ, ದರ್ಶನ್ ಪುಟ್ಟಣ್ಣಯ್ಯ ಗೈರಾಗಿದ್ದಾರೆ. ಈ ಹಿಂದೆ ಸುಮಲತಾ ಸಂಸದರಾಗಿದ್ದಾಗಲೂ ಜೆಡಿಎಸ್‌ನವರಿಂದ ಅಸಹಕಾರ ಚಳವಳಿ ನಡೆದಿತ್ತು. ಸುಮಲತಾ ಅಧ್ಯಕ್ಷತೆಯ ಬಹುತೇಕ ದಿಶಾ ಸಭೆಗಳಿಗೆ ನಿರಂತರ ಗೈರಾಗಿ ಅಸಹಕಾರ ಚಳವಳಿ ನಡೆಸುತ್ತಿದ್ದ ಜೆಡಿಎಸ್‌ ಶಾಸಕರು, ಹಾಲಿ ಸಂಸದ ಹೆಚ್ಡಿಕೆ ಅಧ್ಯಕ್ಷತೆಯ ದಿಶಾ ಸಭೆಯಿಂದಲೂ ದೂರ ಉಳಿಯುತ್ತಿದ್ದಾರೆ.