ನವದೆಹಲಿ - ರಾಷ್ಟ್ರ ರಾಜಧಾನಿಯಲ್ಲಿ ಹೀನಾಯ ಸೋಲಿನ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಬಲವರ್ಧನೆ ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ನಾಯಕರ ಗಮನ ಹರಿಸಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂಬಂತೆ ವಿವಿಧ ರಾಜ್ಯಗಳ ಉಸ್ತುವಾರಿಗಳ ಬದಲಾವಣೆ ಮಾಡಿ ಎಐಸಿಸಿ ಆದೇಶ ಹೊರಡಿಸಿದ್ದಾರೆ.
ಮೊನ್ನೆಯಷ್ಟೇ ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದರು.
ಈ ಪ್ರಕಾರ ಸದ್ಯ ಹರಿಯಾಣದ ಉಸ್ತುವಾರಿಯಾಗಿ ಬಿ.ಕೆ.ಹರಿಪ್ರಸಾದ್ , ಹಿಮಾಚಲ ಪ್ರದೇಶ, ಚಂಡೀಗಡ್‌ಗೆ ರಜನಿಪಾಟೀಲ್ , ಮಧ್ಯಪ್ರದೇಶಗೆ ಹರೀಶ್ ಚೌದರಿ , ತಮಿಳುನಾಡು, ಪುದುಚೇರಿ ಭಾಗಕ್ಕೆ ಗಿರೀಶ್ ಚೌದರಿ , ಒರಿಸ್ಸಾಗೆ ಅಜಯ್ ಕುಮಾರ್ ಲಲ್ಲು , ಜಾರ್ಖಂಡ್ ಉಸ್ತುವಾರಿಗೆ ಕೆ.ರಾಜು , ತೆಲಂಗಾಣಕ್ಕೆ ಮೀನಾಕ್ಷಿ ನಟರಾಜನ್ , ಮಣಿಪುರ, ತ್ರಿಪುರ, ಸಿಕ್ಕಿಂ, ನಾಗಾಲ್ಯಾಂಡ್ ಭಾಗಕ್ಕೆ ಸಪ್ತಗಿರಿ ಶಂಕರ್ , ಬಿಹಾರಗೆ ಕೃಷ್ಣಾಅಲ್ವಾರ್ , ಜಮ್ಮು ಕಾಶ್ಮೀರಕ್ಕೆ ಪ್ರ.ಕಾ,ನಾಸೀರ್ ಹುಸೇನ್ ಹಾಗೂ ಪಂಜಾಬ್ ಗೆ ಪ್ರ.ಕಾ.ಭೂಪೇಶ್ ಬಘೇಲ್ ರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ.