ಕರ್ನಾಟಕ

3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಜೋರಾಗಿದೆ- ಎಚ್.ಸಿ ಮಹದೇವಪ್ಪ

ಚನ್ನಪಟ್ಟಣ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷವೊಡ್ಡುತ್ತಿರುವ ಬಗ್ಗೆ ಮಾತನಾಡಿ, ಉಪಚುನಾವಣೆಯಲ್ಲಿ ಯಾರೇ ಅಕ್ರಮ ಮಾಡಿದರು ಚುನಾವಣಾ ಆಯೋಗ ಆ ಬಗ್ಗೆ ಕ್ರಮ ಕೈಗೊಳ್ಳುತ್ತೆ‌ ಎಂದು ಮೈಸೂರಿನಲ್ಲಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.

ಮೈಸೂರು : ಮುಡಾ 50:50 ಅನುಪಾತದದ ನಿವೇಶನ ವಾಪಸ್ ಪಡೆಯುವ ವಿಚಾರಕ್ಕೆ ಸಂಬಂಧಿದಂತೆ, ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಮಾತನಾಡಿ, ಯಾವು ಅಕ್ರಮವಾಗಿದ್ದಾವೋ ಅವು ಕಾನೂನಾತ್ಮಕವಾಗಿ ವಾಪಸ್ ಬರಲೇಬೇಕು. ಈಗ ಯಾವುದು ಅಕ್ರಮ ಯಾವುದು ಕಾನೂನು ಪ್ರಕಾರ ನಡೆದಿದೆ ಎನ್ನುವುದರ ಪರಿಶೀಲನೆ ಸಾಗಿದೆ. ಅಕ್ರಮ ನಡೆದಿದ್ದರೆ ನಿಶ್ಚಿತವಾಗಿ ಅವು ಕಾನೂನುವ್ಯಾಪ್ತಿಗೆ ಬರುತ್ತದೆ ಎಂದರು.

ವೈದ್ಯ ಪದವಿ, ಅಂಬೇಡ್ಕರ್‌ ಅನುಯಾಯಿ: 4ನೇ ಬಾರಿಗೆ ಎಚ್‌.ಸಿ ಮಹದೇವಪ್ಪ ಸಚಿವ

ಗ್ಯಾರೆಂಟಿ ಯೋಜನ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಗ್ಯಾರೆಂಟಿ ಯೋಜನೆ ಪರಿಷ್ಕರಣೆಯೂ ಇಲ್ಲ ನಿಲ್ಲಿಸುವುದು ಇಲ್ಲ, ಆ ಪ್ರಶ್ನೆಗಳೇ ಉದ್ಭವಿಸುವುದಿಲ್ಲ. ಕೆಲವರಿಗೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತದೆ, ನಾವು ಕಟ್ಟುತ್ತೇವೆ ಅಂತಾರೇ, ಕೆಲವರು ಬಸ್ ಟಿಕೆಟ್ ಹಣ ಕೊಡುತ್ತೇವೆ ಎನ್ನುತ್ತಾರೆ ಅದು ಅವರ ಇಚ್ಚೇ. ನಾವು ಮಾತ್ರ ಎಲ್ಲರಿಗೂ ಗ್ಯಾರೆಂಟಿ ಯೋಜನೆ ಕೊಟ್ಟಿದ್ದೇವೆ. ಅದನ್ನ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರು, ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಇದೆ. ಎಲ್ಲರಿಗೂ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. ನಮಗೆ ನಮ್ಮ ಪರವಾದ ಅಲೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷವೊಡ್ಡುತ್ತಿರುವ ಬಗ್ಗೆ ಮಾತನಾಡಿ, ಉಪಚುನಾವಣೆಯಲ್ಲಿ ಯಾರೇ ಅಕ್ರಮ ಮಾಡಿದರು ಚುನಾವಣಾ ಆಯೋಗ ಆ ಬಗ್ಗೆ ಕ್ರಮ ಕೈಗೊಳ್ಳುತ್ತೆ‌ ಎಂದು ಮೈಸೂರಿನಲ್ಲಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.