ಕರ್ನಾಟಕ

ನೀರಿನ ದರ ಏರಿಕೆಗೆ ಚಿಂತನೆ: ಶಾಸಕರಿಗೆ ಜಲಮಂಡಳಿಯ ಅಧ್ಯಕ್ಷರಿಂದ ಪತ್ರ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇದೀಗ ನೀರಿನ ದರ ಏರಿಕೆಗೆ ಚಿಂತನೆ ಮಾಡಿದೆ.

ಬೆಂಗಳೂರು: ಸಿಲಿಕಾನ್‌ ಸಿಟಿ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಬಿಸಿ ತಟ್ಟಲಿದೆ ಅಂತ ಕಾಣಿಸುತ್ತದೆ. ಯಾಕಂದ್ರೆ ಜಲಮಂಡಳಿ ಬೆಲೆ ಏರಿಕೆ ಬಗ್ಗೆ ಡಿಕೆಶಿ ನೇತೃತ್ವದ ಮುಂದಿನ ಸಭೆಯಲ್ಲಿ ತೀರ್ಮಾನ ಮಾಡುವ ಸಾಧ್ಯತೆ ಇದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇದೀಗ ನೀರಿನ ದರ ಏರಿಕೆಗೆ ಚಿಂತನೆ ಮಾಡಿದೆ. ತೀವ್ರ ನಷ್ಟ ಅನುಭವಿಸುತ್ತಿರುವ ಮಂಡಳಿ ಈಗ ಬೆಲೆ ಏರಿಸಲು ಮುಂದಾಗಿದೆ. 

ಎಲ್ಲ ಶಾಸಕರಿಗೆ ಜಲಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಪತ್ರ ಬರೆದಿದ್ದಾರೆ. ಇದಕ್ಕೆ ಬೆಂಬಲ ನೀಡುವಂತೆ ಬೆಂಗಳೂರು ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ 27 ಮಂದಿ ಶಾಸಕರಿಗೆ ಮನವಿ ಮಾಡಿದೆ. 

2014 ರ ನವೆಂಬರ್ನಲ್ಲಿ ಈ ಹಿಂದೆ ನೀರಿನ ದರ ಪರಿಷ್ಕರಣೆ ಮಾಡಲಾಗಿತ್ತು. ಅದೇ ಕೊನೆಯ ದರ ಪರಿಷ್ಕರಣೆ. ಹೀಗಾಗಿ ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶೀಘ್ರದಲ್ಲೇ ನಡೆಯಲಿರುವ ಸಭೆಯಲ್ಲಿ ದರ ಏರಿಕೆ ಪ್ರಸ್ತಾಪ ಬೆಂಬಲಿಸಬೇಕು ಎಂದು ಶಾಸಕರಿಗೆ ಬರೆದ ಪತ್ರದಲ್ಲಿ ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.

ನಷ್ಟದಲ್ಲಿ ಜಲಮಂಡಳಿ

 ಜಲ ಮಂಡಳಿಯ ಮಾಸಿಕ ವೆಚ್ಚವು 170 ಕೋಟಿ ರೂಪಾಯಿಗಳಾಗಿದ್ದು, ನೀರಿನ ಬಿಲ್‌ಗಳಿಂದ ಬರುವ ಆದಾಯ ಕೇವಲ 129 ಕೋಟಿ ರೂಪಾಯಿ ಆಗಿದೆ. ಇದು ಜಲಮಂಡಳಿಗೆ 41 ಕೋಟಿ ರೂಪಾಯಿಗಳ ಕೊರತೆ ಉಂಟುಮಾಡಿದೆ