ವೈರಲ್
ಹಸೆಮಣೆ ಏರಬೇಕಾಗಿದ್ದ ಕಾನ್ಸ್ ಟೇಬಲ್ ರಸ್ತೆಯಲ್ಲೇ ಮರ್ಡರ್..!
ಮದುವೆಯ ಬಗ್ಗೆ ನೂರು ಕನಸು ಹೊತ್ತು ಕೈಯಲ್ಲಿ ಇನ್ವಿಟೇಷನ್ ಹಿಡಿದು ಹೊರಟ ಕಾನ್ಸ್ ಟೇಬಲ್ ನಡುರಸ್ತೆಯಲ್ಲೇ ಕೊಲೆಯಾಗಿ ಹೋದ ಘಟನೆ ಹಾಸನ ತಾಲ್ಲೂಕಿನ ದುದ್ದ ಗ್ರಾಮದ ಬಳಿ ನಡೆದಿದೆ.
ಹಾಸನ : ಮದುವೆಯ ಬಗ್ಗೆ ನೂರು ಕನಸು ಹೊತ್ತು ಕೈಯಲ್ಲಿ ಇನ್ವಿಟೇಷನ್ ಹಿಡಿದು ಹೊರಟ ಕಾನ್ಸ್ ಟೇಬಲ್ ನಡುರಸ್ತೆಯಲ್ಲೇ ಕೊಲೆಯಾಗಿ ಹೋದ ಘಟನೆ ಹಾಸನ ತಾಲ್ಲೂಕಿನ ದುದ್ದ ಗ್ರಾಮದ ಬಳಿ ನಡೆದಿದೆ. ಅರಸೀಕೆರೆ ತಾಲ್ಲೂಕಿನ ಬಾಗೇಶಪುರ ಗ್ರಾಮದ ಬಿ.ವಿ ಹರೀಶ್ ಕೊಲೆಯಾದ ಕಾನ್ಸ್ ಟೇಬಲ್. ಹರೀಶ್ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸವನ್ನ ಮಾಡುತ್ತಿದ್ದರು.
ಇದೇ ನವಂಬರ್ 11 ರಂದು ಹರೀಶ್ ರ ವಿವಾಹ ನಿಶ್ಛಯವಾಗಿತ್ತು. ಅದಕ್ಕಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಲು ಹರೀಶ್ ತಮ್ಮ ಸಂಬಂಧಿಕರ ಮನೆಗೆ ಇದೇ ಸೋಮವಾರ ತೆರಳಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಹರೀಶ್ ರ ಕಣ್ಣಿಗೆ ಕಾರದಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆಯ ಹಿಂದೆ ಅಕ್ರಮ ಸಂಬಂಧ ಕಾರಣವಾಗಿತ್ತಾ ಎಂಬ ಅನುಮಾನ ಇದೀಗ ಪೊಲೀಸರಲ್ಲಿ ಸುಳಿದಾಡೋದಕ್ಕೆ ಶುರುವಾಗಿದೆ.