ಮಂಡ್ಯ - ಸರ್ಕಾರ-ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಕಳೆದ 6 ದಿನಗಳಿಂದ ವಿಎಗಳು ಮುಷ್ಕರಕ್ಕೆ ಕುಳಿತಿದ್ದಾರೆ. ಮಂಡ್ಯ ತಾಲ್ಲೂಕು ಕಚೇರಿ ಬಳಿ ಪ್ರತಿಭಟನೆ ನಡೆಯುತ್ತಿದೆ. ಇತ್ತ ಕೆಲಸ ಕಾರ್ಯಗಳಾಗದೆ ಸಾರ್ವಜನಿಕರ ಪರದಾಟವಾಗಿದೆ. ಇನ್ನೂ , ಗ್ರಾಮ ಆಡಳಿತಾಧಿಕಾರಿಗಳ 2ನೇ ಹಂತದ ಮುಷ್ಕರ ನಡೆಯುತ್ತಿದ್ದು , ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಧಿಕಾರಿಗಳು ಧರಣಿಗೆ ಕುಳಿತಿದ್ದಾರೆ. ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಕುಳಿತ ವಿಎಗಳು ಯಾವುದೇ ಕಾರಣಕ್ಕೆ ಕೆಲಸ ಮಾಡಲ್ಲ ಎಂದು ಪಣತೊಟ್ಟಿದ್ದಾರೆ. ಇದೇ ವೇಳೆ ಕಪ್ಪು ಪಟ್ಟಿ ಕಟ್ಟಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಮಾಡುತ್ತಿದ್ದಾರೆ.
VA ಗಳಿಗೆ ಕಚೇರಿ ವ್ಯವಸ್ಥೆ, ಕಂಪ್ಯೂಟರ್ ಸೇವೆ, ಇಂಟರ್ನೆಟ್ ವ್ಯವಸ್ಥೆ ಸೇರಿ ಮೂಲಭೂತ ಸೌಕರ್ಯಗಳನ್ನ ಒದಗಿಸುವಂತೆ ಆಗ್ರಹಿಸಲಾಗಿದೆ. ಇಲ್ಲದಿದ್ದರೆ ಮುಷ್ಕರ ಮುಂದುವರಿಸುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಹ ನೀಡಿದ್ದಾರೆ. ತಕ್ಷಣವೇ ಮೂಲಭೂತ ಸೌಕರ್ಯಗಳ ಒದಗಿಸಲು ಒತ್ತಾಯ ಮಾಡಲಾಗಿದೆ. ಈ ಸಂಬಂಧ ರೈತ ಮುಖಂಡರು ವಿಎ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಿದ್ದಾರೆ. ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂಬ ಅಭಿಪ್ರಾಯಿಸಿದ್ದಾರೆ.