ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಇಂದು ದಾಖಲೆಯ ಎಂಟನೇ ಬಜೆಟ್ ಮಾಡಲಿದ್ದು, ದೇಶದ ಚಿತ್ತ ಇಂದಿನ ಆಯವ್ಯಯದತ್ತ ನೆಟ್ಟಿದೆ. ನಿನ್ನೆಯಿಂದಲೇ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ರಾಷ್ಟ್ರಪತಿ ದ್ರೌಪತಿ ಮುರ್ಮು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ್ದರು. ಇಂದಿನ ಅದಿವೇಶನದಲ್ಲಿ ಬಜೆಟ್ ಮಂಡಿಸಲು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಸಜ್ಜಾಗಿದ್ದು, ಮೋದಿ 3.0 ಸರ್ಕಾರದ ಲೆಕ್ಕಾಚಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ.
ಇಂದಿನ ಬಜೆಟ್ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದ್ದು, ಮಹಿಳೆಯರು, ಮಧ್ಯಮರ್ಗದವರು, ಕಾರ್ಮಿಕರು, ಬಡ ಮತ್ತು ಮಧ್ಯಮವರ್ಗ ರೈತರು, ವ್ಯಾಪಾರಿಗಳಿಗೆ, ವಿದ್ಯಾರ್ಥಿಗಳು ಸೇರಿ ವಿವಿಧ ವರ್ಗದ ಮಂದಿ ಭಾರಿ ನಿರೀಕ್ಷೆ ಇಟ್ಟಿದ್ದಾರೆ. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಪ್ರಮಾಣಧ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದೆ.
ಇಂದಿನ ಆಯವ್ಯಯದ ಮೇಲೆ ಜನರ ನಿರೀಕ್ಷೆಗಳೇನು?
- ರಸಗೊಬ್ಬರದ ಮೇಲೆ ಸಬ್ಸಿಡಿ
- ಹೊಸ ತೆರಿಗೆ ಪದ್ದತಿಯಲ್ಲಿ ಮನೆಹೊಂದುವವರಿಗೆ ವಿನಾಯಿತಿ
- ಉದ್ಯೋಗಿಗಳ ಮನೆ ಬಾಡಿಗೆ 50% ಹೆಚ್ಚಳ
- ಯುವಕ ಯುವತಿಯರಿಗೆ ಹೆಚ್ಚಿನ ಉದ್ಯೋಗವಕಾಶ
- ವಿದ್ಯಾರ್ಥಿಗಳಿಗೆ AI ಮತ್ತು ತಂತ್ರಜ್ಞಾನ ಕೌಶಲ್ಯ
- ಮಹಿಳೆಯರಿಗೆ ಉಚಿತ ಲಸಿಕ ನೀಡುವ ಯೋಜನೆ
- ಮಹಿಳೆಯರು ನಡೆಸುವ ಉದ್ಯಮಗಳಿಗೆ GST ವಿನಾಯಿತಿ
- ಮಹಿಳೆಯರನ್ನ ಕೇಂದ್ರೀಕರಿಸುವ ಹೊಸ ಯೋಜನೆ
- ಲಕ್ ಪತಿ ದೀದಿ.. ಡ್ರೋನ್ ದೀದಿ ಯೋಜನೆ
- ಸುಲಭ ಸಾಲದ ಸೌಲಭ್ಯ.. ಕಡಿಮೆ ಬಡ್ಡಿದರ