ವೈರಲ್

ನ್ಯೂ ಇಯರ್‌ಗೆ ಕೌಂಟ್‌ಡೌನ್..ನಗರದಲ್ಲಿ ಖಾಕಿ ಕಟ್ಟೆಚ್ಚರ..!

2024 ಮುಗಿದು 2025ನೇ ವರ್ಷಕ್ಕೆ ಕಾಲಿಡೋಕೆ ಇನ್ನೇನು ದಿನಗಣನೆ ಬಾಕಿ ಇದೆ. ಸಂಭ್ರಮಾಚರಣೆ ಜೋರಾಗೀಯೇ ಇರುವ ಹಿನ್ನೆಲೆ, ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

2024 ಮುಗಿದು 2025ನೇ ವರ್ಷಕ್ಕೆ ಕಾಲಿಡೋಕೆ ಇನ್ನೇನು ದಿನಗಣನೆ ಬಾಕಿ ಇದೆ. ಸಂಭ್ರಮಾಚರಣೆ ಜೋರಾಗೀಯೇ ಇರುವ ಹಿನ್ನೆಲೆ, ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಕುರಿತು ಬಿಬಿಎಂಪಿ, ಬೆಸ್ಕಾಂ ಸೇರಿ ಎಲ್ಲಾ ಇಲಾಖೆ ಜೊತೆಗೆ ಸಭೆ ನಡೆಸಿ ಮಾರ್ಗಸೂಚಿ ತಯಾರಿಸಲಾಗಿದೆ. ಲೈಟಿಂಗ್‌ ವ್ಯವಸ್ಥೆ, ಬ್ಯಾರಿಕೇಡ್‌ ವ್ಯವಸ್ಥೆ, ಅಗ್ನಿಶಾಮಕ ಸಹಾಯದ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಮುಖವಾಗಿ ಎಂಜಿ ರೋಡ್‌, ಬ್ರಿಗೇಡ್‌ ರೋಡ್‌, ಕೋರಮಂಗಲ, ಇಂದಿರಾನಗರ ಸೇರಿ ಎಲ್ಲೆಲ್ಲಿ ಜನಸಂಖ್ಯೆ ಇರುತ್ತೋ ಅಲ್ಲೆಲ್ಲ ಒಂದಷ್ಟು ಪ್ಲಾನ್‌ ಮಾಡಲಾಗಿದೆ. 

ಅದ್ರಲ್ಲೂ ಬ್ರಿಗೇಡ್‌, ಎಂಜಿ ರೋಡ್‌ನಲ್ಲಿ ಏಕಮುಖ ಸಂಚಾರ, ಸೇಫ್ಟಿ ಐಲ್ಯಾಂಡ್‌, ಸಿಸಿಟಿವಿ, ಡ್ರೋನ್‌ ಕ್ಯಾಮೆರಾ ಬಳಕೆಯಾಗುತ್ತದೆ. ಅಲ್ಲದೇ ಶ್ವಾನದಳ ಕೂಡ ತಪಾಸಣೆ ಮಾಡಲಾಗುತ್ತೆ..ಜೊತೆಗೆ  ಈ ವೇಳೆ ನಡೆಯುವ ಮಾದಕ ಜಾಲದ ಮೇಲೂ ಕೂಡ ಕಣ್ಣಿಡಲಾಗಿದೆ..
ಈಗಾಗಲೇ‌ 3 ವಿದೇಶಿ ಡ್ರಗ್ ಪೆಡ್ಲರ್ ಸೇರಿ‌ 70 ಜನರನ್ನ ಬಂಧಿಸಿದ್ದು, ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ ಸೇರಿ ಮಾದಕ ವಸ್ತು ಜಪ್ತಿ ಮಾಡಲಾಗಿದೆ.. ಲೇಟ್ ನೈಟ್ ಓಪನ್ ಮಾಡುವ ರೆಸ್ಟೋರೆಂಟ್, ಹೋಟೆಲ್, ಪಬ್ ನವರಿಗೆ, ರಾತ್ರಿ ಒಂದು ಗಂಟೆಯೊಳಗಡೆ ಪಬ್‌ ಮುಚ್ಚಬೇಕೆಂದು ಸೂಚನೆ ನೀಡಲಾಗಿದೆ.

ಆ ದಿನ ರಾತ್ರಿ ಎಲ್ಲಾ ಕುಡಿದು ರಂಪಾಟ ಮಾಡುವ ಸಾಧ್ಯತೆ ಹಾಗೂ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರಲಿದ್ದು, ಎಲ್ಲಾ ರೀತಿಯ ಫ್ಲೈ ಓವರ್‌ ಕ್ಲೋಸ್‌ ಇರುತ್ತದೆ. ಅಲ್ಲದೇ ಹೊರ ವಲಯದಲ್ಲಿ ನಡೆಯುವ ಪಾರ್ಟಿಗಳ ಮೇಲೂ ಕಣ್ಣಿಡಲಾಗಿದೆ..ಆ ದಿನ ಎಂಜಿ ರೋಡ್‌ ಮೆಟ್ರೋ ಸ್ಟೇಷನ್‌ ರಾತ್ರಿ 11ರಿಂದ 2 ಗಂಟೆವರೆಗೂ ಬಂದ್‌ ಮಾಡಲಾಗುತ್ತದೆ. ಈ ಬಗ್ಗೆ ಬಿಎಂಆರ್‌ಸಿಎಲ್‌ ಜೊತೆಗೂ ಮಾತು ಕತೆ ನಡೆಸಲಾಗಿದೆ. ಬದಲಾಗಿ ಟ್ರಿನಿಟಿ ಅಥವಾ ಅನಿಲ್‌ಕುಂಬ್ಳೆ ರಸ್ತೆ ಬಳಿಯ ಮೆಟ್ರೋ ಹತ್ತಿ ಹೋಗಬಹುದು. ಈ ಬಗ್ಗೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.