ಹೊಸ ವರ್ಷಕ್ಕೆ ಇನ್ನೇನು ಕೌಂಟ್‌ಡೌನ್ ಶುರುವಾಗಿದೆ. ನಗರದೆಲ್ಲೆಡೆ ಖಾಕಿ ಕಟ್ಟೆಚ್ಚರ ಕಾಯ್ದಿರಿಸಲಾಗಿದೆ. ನಗರದಲ್ಲೆಲ್ಲೂ ಅಹಿತಕರ ಘಟನೆ ನಡೆಯದಂತೆ, ಪೊಲೀಸ್ ಇಲಾಖೆಯಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ನಗರದೆಲ್ಲೆಡೆ 2,500 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಹಾಟ್ ಸ್ಪಾಟ್‌ಗಳಲ್ಲಿ ಹೆಚ್ಚುವರಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಂ.ಜಿ ರೋಡ್, ರಿಚ್ಮಂಡ್ ರಸ್ತೆ, ಜಯನಗರ, ಇಂದಿರಾನಗರ ಹಲವು ಕಡೆ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಿದ್ದೇವೆ. ಇಂದು ನ್ಯೂ ಇಯರ್ ಪಾರ್ಟಿಗೆ ಸುಮಾರು ಎಂಟು ಲಕ್ಷ ಜನ ಸೇರುವ ಸಾಧ್ಯತೆ ಇದ್ದು, ಅಗತ್ಯ ಕ್ರಮಗಳನ್ನು ಗೃಹ ಇಲಾಖೆ ತೆಗೆದುಕೊಂಡಿದೆ. ಹೊಸ ವರ್ಷ ಆಚರಣೆಗೆ ಮಧ್ಯರಾತ್ರಿ ಒಂದು ಗಂಟೆಯವರೆಗೂ ಓಡಾಡುವ ಅವಕಾಶ ಇರುತ್ತೆ.