ವೈರಲ್

ಭೀಕರ ಅಪಘಾತದಲ್ಲಿ ದಂಪತಿ, ಮಗು ದುರ್ಮರಣ : ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ..!

ಟಿಪ್ಪರ್ ಹಿಂಬದಿಯಿಂದ ಬಂದು ಬೈಕ್ ಸವಾರಗೆ ಗುದ್ದಿದ್ದು, ಅಪಘಾತದ ರಬಸಕ್ಕೆ ದೇಹಗಳು ಛಿದ್ರ ಛಿದ್ರವಾಗಿವೆ. ಟಿಪ್ಪರ್ ಟೈಯರ್ ಗೆ ಸಿಲುಕಿದ ದೇಹಗಳನ್ನು ಸುಮಾರು 200 ಮೀಟರ್ ದೂರ ಎಳೆದೊಯ್ದಿದ್ದು, ಎಳೆದೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಾಮರಾಜನಗರ :  ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ದಂಪತಿ ಸೇರಿ ಮಗು ದುರ್ಮರಣ ಹೊಂದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನೆ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ.

ಟಿಪ್ಪರ್ ಹಿಂಬದಿಯಿಂದ ಬಂದು ಬೈಕ್ ಸವಾರಗೆ ಗುದ್ದಿದ್ದು, ಅಪಘಾತದ ರಬಸಕ್ಕೆ ದೇಹಗಳು ಛಿದ್ರ ಛಿದ್ರವಾಗಿವೆ. ಟಿಪ್ಪರ್ ಟೈಯರ್ ಗೆ ಸಿಲುಕಿದ ದೇಹಗಳನ್ನು ಸುಮಾರು 200 ಮೀಟರ್ ದೂರ ಎಳೆದೊಯ್ದಿದ್ದು, ಎಳೆದೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೇರಳಾದ ವೈನಾಡಿನ ಪತಿ ದಾನೇಶ್(37) ಪತ್ನಿ ಅಂಜು(27) ಮಗ ಇಶಾನ್ ಕೃಷ್ಣ(7) ಮೃತ ದುರ್ದೈವಿಗಳಾಗಿದ್ದಾರೆ. ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಮೂವರು ಒಂದೇ ಬೈಕ್ ನಲ್ಲಿ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಈ ಅವಘಡ ನಡೆದಿದೆ.

ಕೂತನೂರು ಗುಡ್ಡದಿಂದ ಮಣ್ಣು ತುಂಬಿಕೊಂಡು ಬರುತ್ತಿ ಕೆ.ಎ.11-ಬಿ 8497 ನೋಂದಣಿಯ ಟಿಪ್ಪರ್ ,ಕುಡಿದ ಮತ್ತಿನಲ್ಲಿ ಚಾಲಕ ಟಿಪ್ಪರ್ ಚಾಲನೆ ಮಾಡಿದ್ದಾನೆ.  ಸ್ಥಳಕ್ಕೆ ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸ್ ಭೇಟಿ, ಪರಿಶೀಲನೆ ನಡೆಸಿದ್ದು, ಕುಡಿದ ಮತ್ತಿನಲ್ಲಿ ಗಾಡಿ ಚಾಲನೆ ಮಾಡಿದ ಚಾಲಕನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ.