ವೈರಲ್

ಜಮೀನಿಗೆ ತೆರಳಿದ್ದ ದಂಪತಿಗಳ ಕತ್ತು ಸೀಳಿ ಬರ್ಬರ ಕೊಲೆ

ಪೋಷಕರ ಬರ್ಬರ ಹತ್ಯೆ ಬೆನ್ನಲ್ಲೇ ಪುತ್ರಿ ಹರ್ಷಿತಾ ತುರುವನೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತಿ ಮಂಜುನಾಥ್ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ವರ್ಷದ ಹಿಂದೆ ಮಂಜುನಾಥ್ ಜತೆ ಹರ್ಷಿತಾ ಮದುವೆ ಆಗಿತ್ತು. ವಿವಾಹ ಆದಾಗಿನಿಂದಲೂ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಮಂಜುನಾಥ್‌ ಮತ್ತು ಕುಟುಂಬಸ್ಥರು ಆಗಾಗ್ಗೆ ನಮ್ಮ ವಿರುದ್ಧ ಗಲಾಟೆ ಮಾಡುತ್ತಿದ್ದರು.

ಚಿತ್ರದುರ್ಗ : ದಂಪತಿಗಳಿಬ್ಬರು ಜಮೀನಲ್ಲಿ ಈರುಳ್ಳಿ ಬೆಳೆ ನೋಡಿಕೊಂಡು ಬರಲು ಹೊಗಿದ್ದ ವೇಳೆ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಬೊಮ್ಮಕ್ಕನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಸಾವಿಗೀಡಾದ ಮೃತರನ್ನು ಹನುಮಂತಪ್ಪ (46) ಮತ್ತು ಅವರ ಪತ್ನಿ ತಿಪ್ಪಮ್ಮ (42) ಎಂದು ಗುರುತಿಸಲಾಗಿದೆ. ಈ ಕೊಲೆಯ ಹಿಂದೆ ಅಳಿಯನ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

BREAKING : ಚಿತ್ರದುರ್ಗದಲ್ಲಿ ದಂಪತಿಗಳ ಕತ್ತು ಸೀಳಿ ಬರ್ಬರ ಕೊಲೆ : ಅಳಿಯನಿಂದಲೇ ಅತ್ತೆ-ಮಾವನ ಹತ್ಯೆ ಶಂಕೆ!

ಹೌದು, ಪೋಷಕರ ಬರ್ಬರ ಹತ್ಯೆ ಬೆನ್ನಲ್ಲೇ ಪುತ್ರಿ ಹರ್ಷಿತಾ ತುರುವನೂರು ಠಾಣೆಯಲ್ಲಿ  ದೂರು ದಾಖಲಿಸಿದ್ದು, ಪತಿ ಮಂಜುನಾಥ್ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ವರ್ಷದ ಹಿಂದೆ ಮಂಜುನಾಥ್ ಜತೆ ಹರ್ಷಿತಾ ಮದುವೆ ಆಗಿತ್ತು. ವಿವಾಹ ಆದಾಗಿನಿಂದಲೂ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಮಂಜುನಾಥ್‌ ಮತ್ತು ಕುಟುಂಬಸ್ಥರು ಆಗಾಗ್ಗೆ ನಮ್ಮ ವಿರುದ್ಧ ಗಲಾಟೆ ಮಾಡುತ್ತಿದ್ದರು. ಪತಿ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಹಿನ್ನೆಲೆ ಒಂದು ತಿಂಗಳ ಹಿಂದಷ್ಟೇ ತಾಯಿ ತಿಪ್ಪಮ್ಮ ಮಗಳನ್ನು ತವರಿಗೆ ಕರೆತಂದಿದ್ದರು ಎಂದು ಹೇಳಲಾಗಿದೆ. ಸದ್ಯ ತುರುವನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರೆದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದು, ನಿಗೂಢ ಹತ್ಯೆಯ ಹಿಂದಿನ ಕಾರಣವೇನು ಎಂಬುದನ್ನು ಪರಿಶೀಲಿಸಿದ್ದಾರೆ. ಎಸ್ಪಿ ರಂಜಿತ್ ಬಂಡಾರು, ಡಿವೈಎಸ್ಪಿ ದಿನಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.