ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆದ್ದಿದ್ದಕ್ಕೆ, ಅವರ ಪತ್ನಿ ಶೀಲಾ ಯೋಗೇಶ್ವರ್ ಹೊಳೆ ಆಂಜನೇಯನ ಹರಕೆ ತೀರಿಸಿದ್ದಾರೆ. ಪತಿ ಗೆಲುವಿನ ಬೆನ್ನಲ್ಲೇ ಮದ್ದೂರಿನ ಹೊಳೆ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ ಅವರು, ಒಂದುಕಾಲು ರೂ. ಹರಕೆ ಕಟ್ಟಿ ಬಂದಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ರು. ಚುನಾವಣೆಗೂ ಮುನ್ನ ಸಿಪಿವೈ ಕುಟುಂಬ ಹೊಳೆ ಆಂಜನೇಯನ ದೇಗುಲಕ್ಕೆ ಭೇಟಿ ನೀಡಿ, ಹರಕೆ ಕಟ್ಟಿಕೊಂಡಿತ್ತು.