ಚನ್ನಪಟ್ಟಣದಲ್ಲಿ ಆಧುನಿಕ ಭಗೀರಥ ಸಿ.ಪಿ ಯೋಗೇಶ್ವರ್ ಈ ಬಾರಿಯೂ ಮತದಾರನ ಮನ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಉಪಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿಪಿವೈ, ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. 1 ಲಕ್ಷದ 12 ಸಾವಿರದ 388 ಮತಗಳನ್ನು ಪಡೆದ ಸಿ.ಪಿಯೋಗೇಶ್ವರ್, 87 ಸಾವಿರದ 31 ಮತಗಳನ್ನು ಪಡೆದ ನಿಖಿಲ್ ಕುಮಾರಸ್ವಾಮಿಯನ್ನು 25 ಸಾವಿರದ 357 ಮತಗಳಿಂದ ಸೋಲಿಸಿದ್ದಾರೆ.
ಈ ಬಾರಿಯ ಚನ್ನಪಟ್ಟಣ ಉಪಚುನಾವಣೆ ಭಾರಿ ಕುತೂಹಲ ಕೆರಳಿಸಿತ್ತು. ಇಬ್ಬರು ಅಭ್ಯರ್ಥಿಗಳ ನಡುವೆ ನೇರಾ ನೇರ ಹಣಾಹಣಿ ಏರ್ಪಟ್ಟಿತ್ತು. ಜಮೀರ್ ಅಹಮದ್ ಖಾನ್ ಅವರು ಹೆಚ್ಡಿಕೆ ಬಗ್ಗೆ ಮಾತನಾಡಿದ್ದೇ ಒಂದು ದೊಡ್ಡ ಸಮರ ಸೃಷ್ಟಿ ಮಾಡಿತ್ತು. ಗ್ಯಾರಂಟಿಗಳ ವಿರುದ್ಧದ ವಾಗ್ದಾಳಿಗಳು, ವಕ್ಫ್ ವಿರುದ್ಧದ ಹೋರಾಟಗಳೆಲ್ಲವೂ ಹುಸಿಯಾದವು. ಕೊನೆಗೆ ನಿರೀಕ್ಷೆ ಮತ್ತು ಆಸೆಯಂತೆಯೇ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸೋತರೇ ನಾನೇ ಸೋತಂತೆ ಎಂದಿದ್ದ, ಡಿಸಿಎಂ ಡಿಕೆಶಿಗೂ ಗೆಲುವಾಗಿದೆ.