ಚನ್ನಪಟ್ಟಣ ಉಪಚುನಾವಣಾ ಅಖಾಡ ರಂಗೇರಿದೆ. ಎನ್ ಡಿಎ ಪ್ರಚಾರ ಜೋರಾಗಿದೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಕೂಡ ಪೈಪೋಟಿ ಕೊಡುತ್ತಿದ್ದಾರೆ. ಇಂದು ಪ್ರಚಾರದ ವೇಳೆ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದರ ಬಗ್ಗೆ, ಸಿಪಿವೈ ವ್ಯಂಗ್ಯವಾಡಿದ್ದಾರೆ. ಯಾವುದೇ ವ್ಯಕ್ತಿ ಯುದ್ಧದಲ್ಲಿ ಸೋಲುತ್ತಿರುವಾಗ ಕಣ್ಣೀರು ಹಾಕುತ್ತಾನೆ ಎಂದರೆ ಅದೇ ಅವನ ಕೊನೆಯ ಅಸ್ತ್ರ ಎಂದಿದ್ದಾರೆ. ನಾಯಕನಾದವನು ಕಣ್ಣೀರು ಒರೆಸಬೇಕೇ ಹೊರತು, ಕಣ್ಣೀರು ಹಾಕಬಾರದು. ಇದೆಲ್ಲ ಪೊಲಿಟಿಕಲ್ ಗಿಮಿಕ್ ಅಷ್ಟೇ ಎಂದು ಲೇವಡಿ ಮಾಡಿದ್ದಾರೆ.