ಕ್ರೀಡೆಗಳು

ಕ್ರೇಜಿ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು; ದೂರಾಗ್ತಾರಾ ಚಹಲ್ ಹಾಗೂ ಧನಶ್ರೀ?

ಊಹಾಪೋಹಗಳಿಗೆಲ್ಲಾ ಪುಷ್ಠಿ ನೀಡುವಂತೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಒಬ್ಬರಿಗೊಬ್ಬರು ಅನ್‌ಫಾಲೋ ಮಾಡಿದ್ದಾರೆ.

ಟೀಂ ಇಂಡಿಯಾದ ಕ್ರೇಜಿ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಖ್ಯಾತ ಕೊರಿಯೋಗ್ರಾಪರ್ ಧನಶ್ರೀ ವರ್ಮಾ ಅವರ ಸುಂದರ ದಾಂಪತ್ಯ ಅಂತ್ಯವಾಗುತ್ತಾ ಎಂಬ ಅನುಮಾನವೀಗ ಶುರುವಾಗಿದೆ. ಹೌದು, ಕಳೆದ ಕೆಲ ದಿನಗಳಿಂದ ಇಬ್ಬರ ದಾಂಪತ್ಯ ಜೀವನ ಸರಿ ಇಲ್ಲ ಎಂಬ ಗುಸುಗುಸು ಓಡಾಡುತ್ತಿತ್ತು. ಈಗ ಊಹಾಪೋಹಗಳಿಗೆಲ್ಲಾ ಪುಷ್ಠಿ ನೀಡುವಂತೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಒಬ್ಬರಿಗೊಬ್ಬರು ಅನ್‌ಫಾಲೋ ಮಾಡಿದ್ದಾರೆ.

ಹೌದು, ಸಾಮಾಜಿಕ ಜಾಲತಾಣ ಇನ್ಟಾಗ್ರಾಂನಲ್ಲಿ  ಚಹಲ್ ತಮ್ಮ ಪತ್ನಿಯೊಂದಿಗಿನ ಎಲ್ಲಾ ಫೋಟೋಗಳನ್ನೂ ಕೂಡ ಡಿಲೀಟ್‌ ಮಾಡಿದ್ದಾರೆ. ಆದರೆ ಧನಶ್ರೀ ವರ್ಮಾ ಮಾತ್ರ ಯಾವುದೇ ಫೋಟೋವನ್ನ ಟಿಲೀಟ್‌ ಮಾಡಿಲ್ಲ. ಇನ್ನೂ ಈ ಬಗ್ಗೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ.