ಸಿರಿಯಾದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದ್ದು, ಅಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ತಕ್ಷಣವೇ ಸಿರಿಯಾವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ತಕ್ಷಣ ಸಿರಿಯಾವನ್ನು ಬಿಟ್ಟು ಭಾರತಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.
ಇನ್ನು ಸಿರಿಯಾ ಟರ್ಕಿಯಿಂದ ಬೆಂಬಲಿತವಾಗಿರುವ ಬಂಡುಕೋರ ಗುಂಪುಗಳು ಮತ್ತು ಮಿಲಿಷಿಯಾಗಳಿಂದ ಸುತ್ತುವರಿದಿದೆ.. ಹೀಗಾಗಿ ಯಾವುದೇ ಕಾರಣಕ್ಕೂ ಈ ಪರಿಸ್ಥಿತಿಯಲ್ಲಿ ಭಾರತೀಯ ಪ್ರಜೆಗಳು ಸಿರಿಯಾ ನಗರಗಳಲ್ಲಿ ಓಡಾಡದಂತೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ.