ಮೈಸೂರು : ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಬಿ ಆರ್ ಕಾವಲು ಗ್ರಾಮದಲ್ಲಿ ಜಿಂಕೆ, ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ. ರೈತರ ಜಮೀನಿಗೆ ಲಗ್ಗೆ ಇಡುತ್ತಿರುವ ಕಾಡು ಮೃಗಗಳು, ರೈತರ ಬೆಳೆಗಳನ್ನ ನಾಶಮಾಡುತ್ತಿವೆ.
ಕಟಾವಿಗೆ ಬಂದಿದ್ದ ಹೂಕೋಸ್ ಬೆಳೆ ಕಾಡು ಪ್ರಾಣಿಗಳ ಹಾವಳಿಗೆ ನಾಶವಾಗಿದ್ದು, ರೈತ ನಾಗೇಗೌಡ ಕಂಗಾಲಾಗಿದ್ದಾರೆ. ಒಂದು ಎಕರೆಯಲ್ಲಿ ಬೆಳೆದಿದ್ದ ಹೂಕೋಸು ಬೆಳೆ ಸಂಪೂರ್ಣ ನಾಶವಾಗಿದ್ದು, ಕಟಾವಿಗೆ ಬರುವ ಹೊತ್ತಿನಲ್ಲೇ ಕಾಡುಪ್ರಾಣಿಗಳು ದಾಳಿ ನಡೆಸುತ್ತಿವೆ. ಕಾಡು ಪ್ರಾಣಿಗಳ ಹಾವಳಿಗೆ ಕಂಗೆಟ್ಟ ಗ್ರಾಮಸ್ಥರು ಆದಷ್ಟು ಬೇಗ ಶಾಶ್ವತ ಪರಿಹಾರ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿಯನ್ನ ಮಾಡಿಕೊಂಡಿದ್ದಾರೆ.