ಶಾಸಕ ಮುನಿರತ್ನ ಮೇಲೆ ಹಲ್ಲೆ ನಡೆದಿರುವ ಬಗ್ಗೆ, ಎಂಎಲ್ಸಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಮುನಿರತ್ನ ಅವರ ಮೇಲೆ ಹಲ್ಲೆ ನಡೆದಿರುವುದು ದುರದೃಷ್ಟಕರ ಸಂಗತಿ. ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾಗಿದ್ದ ಶಾಸಕರು..ಮಂತ್ರಿಯಾಗಿದ್ದವರಂತವರ ಮೇಲೆ ಹಲ್ಲೆ ನಡೆದಿರೋದು ಪ್ರಜಾಪ್ರಭುತ್ವದ ಮಾದರಿಯಲ್ಲ ಎಂದು ಹೇಳಿದ್ದಾರೆ. ಗಾಂಧೀಜಿಯವರು ಬೆಳಗಾವಿ ಅಧಿವೇಶನದ ಅಧ್ಯಕ್ಷತೆವಹಿಸಿ ನೂರು ವರ್ಷ ತುಂಬಿದ ಸಮಯದಲ್ಲಿದ್ದೇವೆ ನಾವು. ಗಾಂಧಿಗಿರಯನ್ನು ನೆನೆಸಿಕೊಳ್ಳುವಾಗ ರಾಜ್ಯದಲ್ಲಿ ದಾದಾಗಿರಿ ನಡೆಯುತ್ತಿದೆ. ಗಾಂಧಿ ರಾಜ್ಯ ಕಟ್ಟುತ್ತೇವೆ ಎಂದು ಬಾಯಲ್ಲಿ ಹೇಳ್ತಾರೆ. ಆದ್ರೆ ಗೂಂಡಾರಾಜ್ಯ ಮಾಡಲು ಹೊರಟಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ನನ್ನ ಮೇಲೆ ನಡೆದ ಹಾಗೂ ಮುನಿರತ್ನ ಅವರ ಮೇಲೆ ನಡೆದ ಹಲ್ಲೆ ಎಂದು ಕಿಡಿ ಕಾರಿದ್ದಾರೆ.