ಕರ್ನಾಟಕ
ವಕ್ಫ್ ರದ್ದುಗೊಳಿಸಲು ಸಂಸತ್‌ನಲ್ಲೂ ಚರ್ಚೆ - ಸಿ.ಟಿ. ರವಿ
ವಕ್ಫ್‌ಗೆ ನೀಡಲಾದ ಎಲ್ಲಾ ಅಧಿಕಾರವನ್ನ ಹಿಂತೆಗೆದುಕೊಳ್ಳಬೇಕು ಅಂತಾ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ..
ವಕ್ಫ್ ವಿರುದ್ಧ ಹೋರಾಟವನ್ನ ತೀವ್ರಗೊಳಿಸಲು ರಾಜ್ಯ ಬಿಜೆಪಿ ಮುಂದಾಗಿದೆ.. ವಕ್ಫ್‌ಗೆ ನೀಡಲಾದ ಎಲ್ಲಾ ಅಧಿಕಾರವನ್ನ ಹಿಂತೆಗೆದುಕೊಳ್ಳಬೇಕು ಅಂತಾ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ.. ನಾವು ಈ ವಿಷಯವನ್ನು ಸಂಸತ್ತಿನಲ್ಲಿಯೂ ಪ್ರಸ್ತಾಪಿಸುತ್ತೇವೆ ಎಂದಿದ್ದಾರೆ.. ಹಿಂದೂ ದೇವಾಲಯ, ರೈತರ ಭೂಮಿ, ಸ್ಮಶಾನ ಮತ್ತು ದಲಿತರ ಆಸ್ತಿಗಳ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸುವುದರ ವಿರುದ್ಧ ಹೋರಾಟ ಮಾಡ್ತೇವೆ ಎಂದಿದ್ದಾರೆ.. ವಕ್ಫ್ ರದ್ದು ಸಂಬಂಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ, ಅಲ್ಲದೆ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ..