ವೈರಲ್

ಫೆಂಗಲ್‌ ಚಂಡಮಾರುತ ಎಫೆಕ್ಟ್..ನೂರಾರು ಎಕರೆಯಲ್ಲಿ ಬೆಳೆದಿದ್ದ ಭತ್ತ ನಾಶ..!

ಫೆಂಗಲ್‌ ಚಂಡಮಾರುತ ಎಫೆಕ್ಟ್‌ ಕರುನಾಡಿಗೂ ತಟ್ಟಿದೆ. ಮೈಸೂರು ಜಿಲ್ಲೆಯಲ್ಲಿ ಮಳೆಯಿಂದ ನಾನಾ ಅವಾಂತರವಾಗಿದೆ.

ಫೆಂಗಲ್‌ ಚಂಡಮಾರುತ ಎಫೆಕ್ಟ್‌ ಕರುನಾಡಿಗೂ ತಟ್ಟಿದೆ. ಮೈಸೂರು ಜಿಲ್ಲೆಯಲ್ಲಿ ಮಳೆಯಿಂದ ನಾನಾ ಅವಾಂತರವಾಗಿದೆ. ನಂಜನಗೂಡು ತಾಲೂಕಿನ ಹಲವು ಗ್ರಾಮಗಳಲ್ಲಿ, ಕಟಾವಿಗೆ ಬಂದಿದ್ದ ನೂರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶವಾಗಿದೆ. ಮುಂಗಾರು ಫಸಲಿನಲ್ಲಿ ಉತ್ತಮ ಭತ್ತವನ್ನು ರೈತರು ಬೆಳೆದಿದ್ದ ಭತ್ತ ಭೂಮಿ ಪಾಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ, ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಮಳೆ ನೀರಿನಲ್ಲಿ ಸಿಲುಕಿ ಸಂಪೂರ್ಣ ಭತ್ತ ನಾಶವಾಗಿದೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.