ಸಿಲಿಂಡರ್ ಸೋರಿಕೆಯಾಗಿ ಮೂರು ಮನೆಗಳೇ ಛಿದ್ರ ಛಿದ್ರವಾಗಿರುವ ಘಟನೆ, ಬೆಂಗಳೂರಿನ ಡಿ.ಜೆ ಹಳ್ಳಿಯ ಆನಂದ್ ಥಿಯೇಟರ್ ಬಳಿ ನಡೆದಿದೆ. ನಿನ್ನೆ ಮಧ್ಯಾಹ್ನ ನಡೆದ ಸ್ಫೋಟದಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ನಾಲ್ಕೂ ಜನ ಈಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ನಾಜೀರ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ. ರೆಗ್ಯೂಲೇಟರ್ ಆನ್ ಆಗಿದ್ರಿಂದ ಗ್ಯಾಸ್ ಲೀಕ್ ಆಗಿದೆ ಎನ್ನಲಾಗುತ್ತಿದೆ. ರೆಗ್ಯೂಲೇಟರ್ ಡೇಟ್ 2016ರಲ್ಲೇ ಎಕ್ಸ್‌ಪೈರ್ ಆಗಿತ್ತು. ಆದ್ರೂ ಅದನ್ನ ಬದಲಿಸದೇ ಬಳಕೆ ಮಾಡಿದ್ದರಿಂದಲೇ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಡಿ.ಜೆ.ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.