ಮೈಸೂರು - ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ರಾಜಕೀಯ ಭವಿಷ್ಯ ಇದೆ ಎಂದು ಅರ್ಜುನ್ ಅವಧೂತ ಗುರೂಜಿ ಭವಿಷ್ಯ ನುಡಿದಿದ್ದಾರೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಸಂಬಂಧ ಸಹೋದರ ಚರ್ಚಿಸಿದರು. ಈ ವೇಳೆ ದರ್ಶನ್ಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಉತ್ತಮ ಅವಕಾಶಗಳು ಲಭ್ಯವಾಗಲಿದೆ ಎಂದು ಗುರುಗಳು ನುಡಿದಿದ್ದಾರೆ.
ನೆನ್ನೆಯವರೆಗೂ ದರ್ಶನ್ 142 ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದರು. ಅನಾರೋಗ್ಯ ಸಂಬಂಧ ಸದ್ಯ 6 ವಾರಗಳ ಕಾಲ ತಾತ್ಕಲಿಕ ಮಧ್ಯಂತರ ಜಾಮೀನು ಆದೇಶವನ್ನ ಹೈಕೋರ್ಟ್ ಹೊರಡಿಸಿದೆ.