ಕರ್ನಾಟಕ

ಡಾಲಿ ಧನಂಜಯ್‌ ಮದುವೆ ಸಂಭ್ರಮ

ಡಾಲಿ ಮದುವೆಯಲ್ಲಿ ಊಟದ ತಯಾರಿ ಹೇಗಿದೆ ಗೊತ್ತಾ ?

ಮೈಸೂರು : ನಟ ಡಾಲಿ ಧನಂಜಯ ಹಾಗೂ ಧನ್ಯತಾ ಮದುವೆ ಸಂಭ್ರಮ ಮನೆ ಮಾಡಿದೆ. ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ ಕಳೆ ಕಟ್ಟಿದೆ. ಮದುವೆ ಅಸೆ ಶಾಸ್ತ್ರ ಪ್ರಾರಂಭವಾಗಿದು , ರೇಷ್ಮೆ ಪಂಚೆಯಲ್ಲಿ ಧನಂಜಯ್‌ ಮಿಂಚುತ್ತಿದ್ದಾರೆ. ಡಾಲಿ ಮದುವೆಗೆ ಆಗಮಿಸುವ ಅಭಿಮಾನಿಗಳಿಗೆ ಭರಪೂರ ಭೋಜನ ವ್ಯವಸ್ಥೆಯೂ ಎಂಎನ್ ಜೆ ಕ್ಯಾಂಟರಿಂಗ್ ವತಿಯಿಂದ ಊಟದ ತಯಾರಿಯಾಗಿದೆ. ಅಭಿಮಾನಿಗಳು, ವಿಐಪಿ, ವಿವಿಐಪಿ ಗಳಿಗೂ ಒಂದೇ ತರದ ಊಟದ ವ್ಯವಸ್ಥೆ ಮಾಡಲಾಗಿದೆ. ಇನ್ನೂ , ಹೋಳಿಗೆ, ತುಪ್ಪ, ಪಾಯಸ, ಮಸಾಲೆದೋಸೆ, ಚಟ್ನಿ, ರೂಮಲಿ ರೋಟಿ, ಪನ್ನೀರ್ ಗ್ರೇವಿ, ಬೇಬಿ ಕಾರ್ನ್ ಮಂಚೂರಿ, ಬೆಂಡೆಕಾಯಿ ಪ್ರೈ, ಬಜ್ಜಿ ವೆಜ್ ಬಿರಿಯಾನಿ, ರಾಯತ, ಕೋಸಂಬರಿ, ಹುಸ್ಲಿ, ಅನ್ನ, ತುಪ್ಪ, ಆಂಧ್ರ ಪಪ್ಪು, ಚಟ್ನಿಪುಡಿ, ತಿಳಿಸಾರು, ಮೊಸರು, ಅಪ್ಪಳ, ಉಪ್ಪಿನಕಾಯಿ ಇದ್ದು , 250 ಸಿಬ್ಬಂದಿಗಳಿಂದ ಊಟ ಬಡಿಸಲು ತಯಾರಿಯಲ್ಲಿದ್ದಾರೆ. ನೂರಾರು ಬಾಣಸಿಗರಿಂದ ಅಡುಗೆ ಕಾರ್ಯವಾಗುತ್ತಿದ್ದು , ನೂಕುನುಗ್ಗುಲು ಉಂಟಾಗದ ರೀತಿಯಲ್ಲಿ ಬ್ಯಾರಿಕೆಡ್ ವ್ಯವಸ್ಥೆ ಹಾಗೂ ಅಭಿಮಾನಿಗಳು, ಗಣ್ಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಾಗಿದೆ. 

ಹಾಗೇ ಧನಂಜಯ ಧನ್ಯತಾ ಮದುವೆ ಸಂಭ್ರಮದಲ್ಲಿ ನಾಡ ಅದಿದೇವತೆ ಚಾಮುಂಡೇಶ್ವರಿ ದೇವಾಲಯ ಮಾದರಿಯಲ್ಲಿ ಮಂಟಪ ನಿರ್ಮಾಣವಾಗಿದೆ. ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ನೇತೃತ್ವದಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಿದ್ದಾರೆ.