ಕರ್ನಾಟಕ

ಸವರ್ಣೀಯರ ವಿರೋಧದ ನಡುವೆ ದೇವಸ್ಥಾನ ಪ್ರವೇಶಿಸಿದ ದಲಿತರು..!

ಸವರ್ಣೀಯರ ವಿರೋಧದ ನಡುವೆಯೂ ದಲಿತರು ದೇವಸ್ಥಾನ ಪ್ರವೇಶಿಸಿರುವ ಘಟನೆ, ಮಂಡ್ಯದ ಹನಕೆರೆ ಗ್ರಾಮದಲ್ಲಿ ನಡೆದಿದೆ.

ಸವರ್ಣೀಯರ ವಿರೋಧದ ನಡುವೆಯೂ ದಲಿತರು ದೇವಸ್ಥಾನ ಪ್ರವೇಶಿಸಿರುವ ಘಟನೆ, ಮಂಡ್ಯದ ಹನಕೆರೆ ಗ್ರಾಮದಲ್ಲಿ ನಡೆದಿದೆ. ಹನಕೆರೆ ಕಾಲ ಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ದಲಿತರ ಪ್ರವೇಶಕ್ಕೆ ಹಿಂದಿನಿಂದಲೂ ನಿರ್ಬಂಧ ಹೇರಲಾಗಿದೆ. ಕಳೆದ ಎರಡೂವರೆ ವರ್ಷಗಳ ಹಿಂದೆ ದೇವಾಲಯ ಪುನರ್ ನಿರ್ಮಾಣವಾದ ಬಳಿಕ, ಧಾರ್ಮಿಕ ದತ್ತಿ ವ್ಯಾಪ್ತಿಗೆ ಬರ್ತಿದ್ದಂತೆ ದಲಿತರ ಪ್ರವೇಶಕ್ಕೆ ಅವಕಾಶ ಕೊಡುವಂತೆ ಪಟ್ಟು ಹಿಡಿಯಲಾಗಿತ್ತು. ದಲಿತರ ದೇವಾಲಯ ಪ್ರವೇಶಕ್ಕೆ ಒಪ್ಪದ ಗ್ರಾಮದ ಸವರ್ಣೀಯರು, 2 ಬಾರಿ ನಡೆಸಿದ ಶಾಂತಿ ಸಭೆ ನಡೆಸಿದ್ರೂ ವಿಫಲವಾಯ್ತು.

ಇಂದು ಪೊಲೀಸರ ಭದ್ರತೆ ನಡುವೆಯೂ ದೇವಾಲಯ ಪ್ರವೇಶಿಸಿದ್ದು, ಸವರ್ಣೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಈ ವೇಳೆ ಎಲ್ಲರೂ ಕೂಲಿ ಮಾಡಿ ಸಂಪಾದಿಸಿದ ಹಣ ಕೊಟ್ಟು ದೇವಾಲಯ ನಿರ್ಮಾಣ ಮಾಡಿದ್ದೇವೆ. ಈಗ ಏಕಾಏಕಿ ನಮ್ಮ ಸಂಪ್ರದಾಯ ಮುರಿದರೆ ಹೇಗೆ? ದೇವರ ಮೂರ್ತಿ ವಾಪಸ್ ಇಡುವಂತೆ ಕೇಳಿದ ಅಧಿಕಾರಿಗಳ ಮುಂದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು. ಈ ಘಟನೆ ಹಿನ್ನೆಲೆ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಿ, ದೇವಾಲಯದ ಬಳಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಿದ್ರು