ಕಾಫಿನಾಡು ಚಿಕ್ಕಮಗಳೂರಿನ ಆಲ್ದೂರಿನಲ್ಲಿ ಶವ ಊಳುವ ವಿಚಾರಕ್ಕೆ, ಒಕ್ಕಲಿಗರು ಹಾಗೂ ದಲಿತರ ನಡುವೆ ಗಲಾಟೆಯಾಗಿದೆ. ದಶಕಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ, ದಲಿತರ ಸ್ಮಶಾನದ ಜಾಗ ಒಕ್ಕಲಿಗರ ಸಮುದಾಯ ಭವನ ಎಂಬ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇಂದು ಈ ವಿವಾದಿತ ಜಾಗ ನಮ್ಮದು ಎಂದು ದಲಿತರು ಶವ ಊಳಲು ಹೋಗಿದ್ದಾಗ, ಒಕ್ಕಲಿಗ ಸಮುದಾಯದಿಂದ ವಿರೋಧ ವ್ಯಕ್ತವಾಗಿದೆ.
ಶವ ಊಳಲು ಬಿಡದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಪೂರ್ಣಿಮಾ ಶ್ರೀನಿವಾಸ್, ಈ ವಿವಾದಿತ ಜಾಗ ನ್ಯಾಯಾಲಯದಲ್ಲಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಗುಂಡಿಯೊಳಗೆ ಇಳಿದು ಮೂರ್ನಾಲ್ಕು ಜನ ಮಹಿಳೆಯರು ಪ್ರತಿಭಟನೆ ಮಾಡಿದ್ರು. ಇದೇ ವೇಳೆ ಸ್ಥಳಕ್ಕಾಗಮಿಸಿದ ಆಲ್ದೂರು ಪೊಲೀಸರು ಎಲ್ಲರನ್ನೂ ಮೇಲಕ್ಕೆ ಕರೆಸಿಕೊಂಡರು.