ಉದ್ದೇಶಪೂರ್ವಕವಾಗಿ ನನ್ನ ಟಾರ್ಗೆಟ್ ಮಾಡಲಾಗ್ತಿದೆ, ಮುಡಾ ಕೇಸಲ್ಲಿ ನನ್ನ ಇಮೇಜ್ ಡ್ಯಾಮೇಜ್ ಮಾಡುವ ಕೆಲಸ ಆಗ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮುಡಾ ಸೈಟು ಹಂಚಿಕೆ ಪ್ರಕರಣ ಮನಿ ಲ್ಯಾಂಡರಿಂಗ್ ಬರೋದಿಲ್ಲ ಎಂದು ಹೈಕೋರ್ಟ್ ಹೇಳಿದೆ. ರಾಜಕೀಯ ದುರುದ್ದೇಶದಿಂದಲೇ ED ತನಿಖೆ ಮಾಡ್ತಿದೆ, ಮುಡಾ ಕೇಸಲ್ಲಿ ಈಗಾಗಲೇ ಲೋಕಾಯುಕ್ತ ತನಿಖೆ ಆಗ್ತಿದೆ, ಅಕ್ರಮ ಹಣ ವರ್ಗಾವಣೆ ಬಗ್ಗೆ ಸಾಕ್ಷ್ಯ ಏನಿದೆ ಹೇಳಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮುಡಾ ಪ್ರಕರಣ ಸಂಬಂಧ ED ಅಧಿಕಾರಿಗಳು ದಾಳಿ ನಡೆಸಿ ಇತ್ತೀಚೆಗೆ ಹಲವು ದಾಖಲೆ ವಶಪಡಿಸಿಕೊಂಡಿದ್ದರು, ಅದರ ವರದಿ ಕೊಟ್ಟಿದ್ದಾರೆ ಅಷ್ಟೇ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತೀಚೆಗೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೇರಿ ಸಚಿವ ಬೈರತಿ ಸುರೇಶ್‌ಗೆ ವಿಚಾರಣೆಗೆ ಬರುವಂತೆ ED ನೋಟಿಸ್ ನೀಡಿತ್ತು.. ಇದನ್ನ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ನ್ಯಾಯಾಲಯ ತಡೆ ಕೂಡ ನೀಡಿದೆ.. ಈ ಬೆನ್ನಲ್ಲೇ ಇದೀಗ ED ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.