ವೈರಲ್

ಗಣಪತಿ ವಿಸರ್ಜನೆಯಲ್ಲಿ ಡ್ಯಾನ್ಸ್ ಮಾಡುವ ವಿಚಾರಕ್ಕೆ ಕಿರಿಕ್ : ಬ್ಲೇಡ್ ನಿಂದ ಮನಸೋ ಇಚ್ಛೆ ಹಲ್ಲೆ

ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುವ ವಿಚಾರವಾಗಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದ್ದು ಗಲಾಟೆ ವಿಕೋಪಕ್ಕೆ ಹೋಗಿ, ಬ್ಲೇಡ್ ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ತಿಮ್ಮರಾಜ್ ಅರಸ್ ಎಂಬಾತ ಹಲ್ಲೆ ನಡೆಸಿದ್ದು, ಗೌತಮ್ ಮುಖ, ಕತ್ತಿಗೆ ಬ್ಲೇಡ್ ನಿಂದ ಹಲ್ಲೆ ನಡೆಸಲಾಗಿದೆ. ಗೌತಮ್ ಕಿವಿಯೇ ಕಟ್ ಆಗಿ ಹೋಗಿದೆ.

ಚಿಕ್ಕಮಗಳೂರು : ಗಣಪತಿ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಮೇಲೆ ಬ್ಲೇಡ್ ನಿಂದ ಹಲ್ಲೆ ನಡೆಸಿರುವ ಘಟನೆಯೊಂದು ಚಿಕ್ಕಮಗಳೂರಿನ ಗವನಗಳ್ಳಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಗೌತಮ್ (23) ಎಂದು ಗುರುತಿಸಲಾಗಿದೆ.

ಹೌದು, ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುವ ವಿಚಾರವಾಗಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದ್ದು ಗಲಾಟೆ ವಿಕೋಪಕ್ಕೆ ಹೋಗಿ, ಬ್ಲೇಡ್ ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ತಿಮ್ಮರಾಜ್ ಅರಸ್ ಎಂಬಾತ ಹಲ್ಲೆ ನಡೆಸಿದ್ದು, ಗೌತಮ್ ಮುಖ, ಕತ್ತಿಗೆ ಬ್ಲೇಡ್ ನಿಂದ ಹಲ್ಲೆ ನಡೆಸಲಾಗಿದೆ. ಗೌತಮ್ ಕಿವಿಯೇ ಕಟ್ ಆಗಿ ಹೋಗಿದೆ. ಮುಖದಿಂದ ಕತ್ತಿನವರೆಗೂ ಗಂಭೀರ ಗಾಯವಾಗಿದೆ. ಗೌತಮ್ ಸ್ಥಿತಿ ಗಂಭೀರವಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.