ಪೊಲೀಸರ ಬಂಧನಕ್ಕೆ ಭಯ ಬಿದ್ದು ಕಳ್ಳ ಕದ್ದ ಚಿನ್ನಾಭರಣಗಳನ್ನ ವಾಪಸ್ ತಂದಿಟ್ಟಿರೋ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ಗ್ರಾಮದ ಸಿದ್ದೇಗೌಡ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಮನೆಮಾಲೀಕ ಪ್ರಕರಣ ದಾಖಲಿಸಿದ್ದ. ಪೊಲೀಸರ ತನಿಖೆಯೂ ಚುರುಕುಗೊಂಡಿತ್ತು. ಈ ಹಿನ್ನಲೆ ಕಳ್ಳ, ಚಿನ್ನಾಭರಣಗಳನ್ನ ಕದ್ದ ಮನೆಯ ಮುಂಭಾಗದ ಜಗುಲಿ ಮೇಲೆ ವಾಪಸ್ ತಂದಿಟ್ಟಿದ್ದಾನೆ. ಸುಮಾರು 75 ಗ್ರಾಂ ಚಿನ್ನಾಭರಣವನ್ನ ಕದ್ದಿದ್ದ ಕಳ್ಳ, ಬಂಧನದ ಭೀತಿಯಿಂದ ಗಪ್ಚುಪ್ ಆಗಿ ಚಿನ್ನಾಭರಣವನ್ನು ವಾಪಸ್ ಮಾಡಿರುವ ಶಂಕೆ ವ್ಯಕ್ತವಾಗಿದೆ.