ನವದೆಹಲಿ - ಸ್ಯಾಂಡಲ್ ವುಡ್ ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಕೊಲೆ ಆರೋಪ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿದೆ. ಹೈಕೋರ್ಟ್ ಜಾಮೀನು ಆದೇಶ ಪ್ರಶ್ನಿಸಿ ಈಗಾಗಲೆ ಸುಪ್ರೀಂಗೆ ಅರ್ಜಿಕೆಯಾಗಿದೆ. ಹೀಗಾಗಿ ದರ್ಶನ್ ಹಾಗೂ ಪವಿತ್ರ ಸೇರಿದಂತೆ ಏಳು ಮಂದಿಗೆ ಜಾಮೀನು ವಜಾಕ್ಕಾಗಿ ಅರ್ಜಿ ಸಲ್ಲಿಸಲಾಗಿದ್ದು, ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ.
ಖ್ಯಾತ ಹಿರಿಯ ಸುಪ್ರೀಂ ವಕೀಲರಾದ ಕಪಿಲ್ ಸಿಬಲ್ ರನ್ನ ದರ್ಶನ್ ಕುಟುಂಬ ಸಂಪರ್ಕ ಮಾಡಿದೆ. ಅಲ್ಲದೆ ಈ ಹಿಂದಿನ ಹೈಕೋರ್ಟ್ ವಾದ ಪ್ರತಿವಾದ , ಕೇಸ್ ಹಿಸ್ಟರಿ ಡೀಟೈಲ್ಸ್ ನೀಡಲಾಗಿದೆ. ಮಾರ್ಚ್ 18 ರಂದು ಸುಪ್ರೀಂ ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಮಾರ್ಚ್ 18 ರಂದು ದರ್ಶನ್ ಪರ ಪರ ಕಪಿಲ್ ಸಿಬಲ್ ವಾದ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇನ್ನೂ ಹೈಕೋರ್ಟ್ ನಲ್ಲಿ ಗೆಲುವು ಕಂಡುಕೊಂಡಂತೆ ಸುಪ್ರೀಂ ನಲ್ಲೂ ಗೆಲುವಿಗಾಗಿ ಕಸರತ್ತು ಮಾಡಲಾಗುತ್ತಿದೆ ಎಂಬ ಮಾತು ಇದೆ.