ಕರ್ನಾಟಕ

ಹೈಕೋರ್ಟ್‌ ನಲ್ಲಿ ಇಂದು ದರ್ಶನ್‌ ಜಾಮೀನು ಅರ್ಜಿ ವಿಚಾರಣೆ..!

ಇಂದು ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಇಂದು ನಟ ದಶನ್‌ ಪಾಲಿಗೆ ಬಿಗ್‌ ಡೇ ಎನ್ನಲಾಗ್ತಿದೆ. ಇಂದು ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ ನಲ್ಲಿ  ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್‌ ಹಾಗೂ ಎಸ್ಪಿಪಿ ಪ್ರಸನ್ನ ಕುಮಾರ್‌ ವಾದ ಮಂಡಿಸಲಿದ್ದಾರೆ.

ಹೈಕೋರ್ಟ್‌ ನ್ಯಾ.ವಿಶ್ವಜಿತ್‌ ಶೆಟ್ಟಿ ಅವರ ಪೀಠದಲ್ಲಿ  ದರ್ಶನ್‌, ಪವಿತ್ರಾ ಗೌಡ, ನಾಗರಾಜ್‌, ಲಕ್ಷ್ಮಣ್‌, ಅನು ಕುಮಾರ್‌ ಮತ್ತು ಜಗದೀಶ್‌ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ನಟ ದರ್ಶನ್‌ ಅನಾರೋಗ್ಯದ ದೃಷ್ಟಿಯಿಂದ ಮಧ್ಯಂತರ ಜಾಮೀನು ಪಡೆದಿದ್ದಾರೆ. ಇದೀಗ ರೆಗ್ಯುಲರ್‌ ಬೇಲ್‌ ಗಾಗಿ ದರ್ಶನ್‌ ಕಸರತ್ತು ನಡೆಸುತ್ತಿದ್ದಾರೆ.