ಕರ್ನಾಟಕ

ಕೊಲೆ ಆರೋಪಿ ದರ್ಶನ್​ ಗೆ ದಿನಕ್ಕೊಂದು ಡಿಮ್ಯಾಂಡ್..! ಈಗ ಏನ್ ಕೇಳ್ತಿದ್ದಾರೆ ಗೊತ್ತಾ..?

ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಇರುವ ದರ್ಶನ್, ದಿನಕ್ಕೊಂದು ಹೊಸ ಬೇಡಿಕೆ ಇಡುತ್ತಿದ್ದಾರೆ. ದರ್ಶನ್ ಬೇಡಿಕೆಗಳಿಗೆ ಜೈಲು ಸಿಬ್ಬಂದಿಗಳೇ ಸುಸ್ತಾಗಿ ಹೋಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್, ಬಳ್ಳಾರಿ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯಗಳಿಲ್ಲದೇ ಸಾಮಾನ್ಯ ಕೈದಿಯಂತೆ ಇದ್ದಾರೆ. ಹೀಗಾಗಿ ಸರ್ಜಿಕಲ್ ಕಮೋಡ್, ಟಿವಿಗೆ ಬೇಡಿಕೆ ಇಟ್ಟಿದ್ದ ದರ್ಶನ್ ಈಗ, ಆರಾಮಾಗಿ ಕುಳಿತುಕೊಳ್ಳುವ ಕುರ್ಚಿಗಾಗಿ ಡಿಮ್ಯಾಂಡ್ ಇಟ್ಟಿದ್ದಾರೆ. ದರ್ಶನ್ ಕೇಳುವ ದಿನಕ್ಕೊಂದು ಬೇಡಿಕೆಗಳು ಪೊಲೀಸರಿಗೆ ತಲೆನೋವು ತಂದಿದೆ.