ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಬಳ್ಳಾರ ಜೈಲಿನಲ್ಲಿ ಸೊರಗಿದ್ದಾರೆ. ಹೊರಗಡೆ ರಾಜನಂತೆ ಕೈಗೊಂದು ಕಾಲಿಗೊಂದು ಜನ ಇಟ್ಟುಕೊಂಡು ಓಡಾಡುತ್ತಿದ್ದ ದಾಸ ಸೆರೆ ಮನೆಯೊಳ ಮಂಕಾಗಿದ್ದಾರೆ.
ಕಾರಾಗೃಹದೊಳಗಿರುವ ದರ್ಶನ್ ಗೆ ಹಲವು ಅನಾರೋಗ್ಯದ ಸಮಸ್ಯೆಗಳು ಬಾಧಿಸುತ್ತಿದೆ. ನಿರಂತರ ಬೆನ್ನನೋವು ದರ್ಶನ್ ರನ್ನ ಕಾಡುತ್ತಿದೆಯಂತೆ ಹೀಗಾಗಿ ಅವರು ಕುಳಿತುಕೊಳ್ಳಲು ಚೇರ್‌ಗೆ ಮನವಿ ಮಾಡಿದ್ದರು.
ವೀಲ್ ಚೇರ್ ಗಾಗಿ ದರ್ಶನ್ ಮನವಿಯನ್ನ ಮಾಡಿ ಈಗಾಗಲೇ ಒಂದು ವಾರ ಕಳೆದಿದೆ. ಆದರು ಕೂಡ ಜೈಲಾಧಿಕಾರಿಗಳಿನ್ನು ದರ್ಶನ್ ಗೆ ಕುರ್ಚಿಯನ್ನ ನೀಡಿಲ್ಲ. ಇದರಿಂದ ಜೈಲಿನ ಅಧಿಕಾರಿಗಳ ಮೇಲೆ ಡಿ ಬಾಸ್ ಗರಂ ಆಗಿದ್ರು ಎನ್ನಲಾಗುತ್ತಿದೆ.
ದರ್ಶನ್ ಚೇರ್ಗೆ ಬೇಡಿಕೆ ಇಟ್ಟಿದ್ದು, ಈ ವಿಚಾರವನ್ನು ಅವರು ಕೋರ್ಟ್ ಎದುರು ಪ್ರಸ್ತಾಪ ಮಾಡಿದ್ದರು.ಅದಕ್ಕೆ ನ್ಯಾಯಾಧೀಶರು ಕೂಡ ಕುರ್ಚಿ ನೀಡಲು ಸಮ್ಮತಿಸಿದ್ರು. ಆದಾಗ್ಯೂ ಚೇರ್ ಏಕೆ ಕೊಟ್ಟಿಲ್ಲ ಎಂದು ಜೈಲಧಿಕಾರಿಗಳ ವಿರುದ್ಧ ದರ್ಶನ್ ಗರಂ ಆಗಿದ್ದಾರೆ. ಆದ್ರೆ ದರ್ಶನ್ ಮಾತಿಗೆ ಜೈಲಾಧಿಕಾರಿಗಳು ಖಡಕ್ ಉತ್ತರ ನೀಡಿದ್ದು, ಕೋರ್ಟ್ನ ಅಧಿಕೃತ ಆದೇಶ ಬಂದ ಬಳಿಕವೇ ಚೇರ್ ಕೊಡಲಾಗುತ್ತದೆ ಎಂದಿದ್ದಾರೆ. ನಂತರ ಜೈಲಾಧಿಕಾರಿಗಳ ಮಾತಿಗೆ ದರ್ಶನ್ ಸಪ್ಪೆ ಮೋರೆ ಹಾಕಿಕೊಂಡಿದ್ದಾರಂತೆ.